ಜಿಲ್ಲೆ ಲಿಂಗಸುಗೂರು ತಾಲ್ಲೂಕು ನಾಗಲಾಪುರ ಗ್ರಾಮದ ಒಂದನೇ ವಾರ್ಡ್ ನಲ್ಲಿ ತಿಂಗಳಿಂದ ನೀರು ಬಾರದೆ ಇರುವುದರಿಂದ ಗ್ರಾಮದ ಮಹಿಳೆಯರು ಖಾಲಿ ಕೊಡಗಳನ್ನು ಹಿಡಿದು ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಕೆಲವು ದಿನಗಳಿಂದ ಹಲವು ಬಾರಿ ಗ್ರಾಮ ಪಂಚಾಯತ ಅಧಿಕಾರಿಗಳಿಗೆ ಗಮನಕ್ಕೆ ತಂದರು ತಮಗೆ ಸಂಬಂಧವಿಲ್ಲದಂತೆ ಬೇಜವಾಬ್ದಾರಿತನ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಒಂದನೇ ವಾರ್ಡ್ ನಲ್ಲಿ ತಿಂಗಳಿಂದ ನೀರು ಬಾರದೆ ಕಾರ್ಯ ಚಟುವಟಿಕೆಗಳಿಗೆ ಅಡೆತಡೆಯಾಗಿದೆ.ನಮ್ಮ ಸಮಸ್ಯೆಗೆ ಯಾವ ಅಧಿಕಾರಿಗಳು ಕೂಡ ಬಗೆಹರಿಸುತ್ತಿಲ್ಲ ಮೇಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಕುಂದು ಕೊರತೆಗಳ ಸಭೆ ನಡೆಸಿ ಬಗೆಹರಿಸಬೇಕು.
ಈ ಸುದ್ದಿ ಓದಿದ್ದೀರಾ?ರಾಯಚೂರು | ಗಾಳಿ ಮಳೆಗೆ ಬೆಳೆ ಹಾನಿ; ಪರಿಹಾರ ನೀಡಲು ಒತ್ತಾಯ
ಕುಡಿಯುವ ನೀರಿನ ಸಮಸ್ಯೆಯನ್ನು ಜನರು ಎದುರಿಸುತ್ತಿದ್ದಾರೆ. ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿ ಪ್ರತಿಭಟನಾಕಾರರನ್ನ ಮನವೊಲಿಸುವಲ್ಲಿ ಪ್ರಯತ್ನ ನಡೆಸಿದ್ದಾರೆ.ನೀರಿನ ಸಮಸ್ಯೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಹನುಮಂತಪ್ಪ ಛಲವಾದಿ , ಪ್ರಧಾನ ಕಾರ್ಯದರ್ಶಿ ಹನುಮಂತ ಗೌಡ ,sk ಆಂಜನೇಯ,ಗಂಗಪ್ಪ ಇನ್ನಿತರರು ಹಾಜರಿದ್ದರು.