ವಕ್ಫ್ ಕಾಯ್ದೆ ವಿರೋಧಿಸಿ ಮಸ್ಕಿ ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಜಾಮೀಯ ಮಸೀದಿಯಿಂದ , ಮೇನ್ ಬಜಾರ್ , ಕನಕ ವೃತ್ತಿ ಮೂಲಕ ಅಂಬೇಡ್ಕರ್ ಸರ್ಕಲ್ ಆವರಣದಲ್ಲಿ ಜಮಾವಣೆಗೊಂಡ ನೂರಾರು ಜನರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ನಂತರ ಕೈಗೆ ಕಪ್ಪು ಪಟ್ಟಕಟ್ಟಿಕೊಂಡು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕುಡಿಯುವ ನೀರಿನ ಸಮಸ್ಯೆ ;ಖಾಲಿ ಕೊಡ ಹಿಡಿದು ಪಂಚಾಯತಿಗೆ ಮುತ್ತಿಗೆ
ಬಿಜೆಪಿ ಸರ್ಕಾರ ಅಧಿಕಾರ ಬಂದಾಗಿನಿಂದ ಮುಸಲ್ಮಾನರ ವಿರುದ್ದ ಹೊಸ ಹೊಸ ಅಸಂವಿಧಾನಿಕ ಕಾಯ್ದೆಗಳು ತಂದು ಒಕ್ಕೆಲೆಬ್ಬಿಸುತ್ತಿದೆ. ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಮುಸ್ಲಿಮರು ಹಕ್ಕನ್ನು ಕಸಿದುಕೊಂಡಿದೆ ಎಂದು ಆಗ್ರಹಿಸಿದರು.
ಸಂಸತ್ ಎರಡು ಸದನದಲ್ಲಿ ಮಿತ್ರಪಕ್ಷಗಳ ಮೇಲೆ ಒತ್ತಡ ಹಾಕಿ ಒತ್ತಾಯ ಪೂರ್ವಕವಾಗಿ ಕಾಯ್ದೆ ಜಾರಿಗೆ ತಂದಿದೆ. ಇದರಿಂದ ಮುಸ್ಲಿಮರಿಗೆ ನೀಡಬೇಕಿದ್ದ ವಕ್ಫ್ ಸೌಲಭ್ಯ ಮೊಟಕುಗೊಳ್ಳಲಿದ್ದು,ವಕ್ಫ್ ನ ಆಸ್ತಿ ಸರ್ಕಾರದ ಪಾಲಾಗುವ ಆತಂಕವಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಸಂವಿಧಾನದ 25 ಮತ್ತು 26 ವಿಧಿವುಳ್ಳ ಪ್ರತಿಯೊಂದು ಧಾರ್ಮಿಕ ಸಮುದಾಯದ ಆತ್ಮಸಾಕ್ಷಿಯ ಸ್ವಾತಂತ್ರ್ಯವನ್ನು ಮಾತ್ರವಲ್ಲದೆ, ಧಾರ್ಮಿಕ ಮತ್ತು ದತ್ತಿ ಕಾರ್ಯಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ಅವುಗಳನ್ನು ತಮ್ಮಷ್ಟಕ್ಕೆ ತಕ್ಕಂತೆ ನಿರ್ವಹಿಸಲು ಅವಕಾಶ ನೀಡುತ್ತವೆ. ಆದರೆ ಪ್ರಸ್ತುತ ತಿದ್ದುಪಡಿ ಮಾಡಿದ ಕಾನೂನು ಮುಸ್ಲಿಮರಿಗೆ ಈ ಮೂಲಭೂತ ಹಕ್ಕನ್ನು ಕಸಿದುಕೊಳ್ಳುತ್ತದೆ ಕೂಡಲೇ ವಕ್ಫ್ ಆಸ್ತಿಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಜಮಾತ್ ಇಸ್ಲಾಂ ಹಿಂದ್ ಮುಖಂಡ ಗನಿಸಾಬ್ ,ಎಸ್ ಐ ಒ ರಾಜ್ಯ ಮುಖಂಡ ಜಿಶಾನ್ ಅಖಿಲ್ ,ಇಂದರ್ ಪಾಶ , ಮಸೂರ ಪಾಶ ,ಗೌಸ್ ಪಾಶ ,ಜಿಲಾನಿ ಖಾಜ, ಅಬ್ದುಲ್ ರೌಫ್, ಸದ್ದಾಂ ಹುಸೇನ್,ನಿಸಾರ್ ಅಹ್ಮದ್,
