ಅಫ್ಘಾನಿಸ್ತಾನದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್ ವರದಿ ಮಾಡಿದೆ.
ಬಾಗ್ಲಾನ್‌ನಿಂದ ಪೂರ್ವಕ್ಕೆ 164 ಕಿಮೀ ದೂರದಲ್ಲಿ ಹಾಗೂ ಭೂಮಿಯ ಮೇಲ್ಮೈನಿಂದ 121 ಕಿಮೀ ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ. ಇಎಂಎಸ್‌ಸಿ ಮೊದಲು ಭೂಕಂಪದ ತೀವ್ರತೆಯನ್ನು 6.4 ತೀವ್ರತೆ ಎಂದು ವರದಿ ಮಾಡಿತ್ತು. ಬಳಿಕ ಪರಿಷ್ಕರಿಸಿ 5.6 ಎಂದು ಉಲ್ಲೇಖಿಸಿದೆ. ಸ್ಥಳೀಯ ಅಧಿಕಾರಿಗಳು ಪರಿಸ್ಥಿತಿಯನ್ನು ನಿರ್ಣಯಿಸುತ್ತಿದ್ದಾರೆ. ಹಿಂದೂ ಕುಶ್ ಪ್ರದೇಶವು ಟೆಕ್ಟೋನಿಕ್ ಪ್ಲೇಟ್ ಗಡಿಗಳಲ್ಲಿ ಇರುವುದರಿಂದ ಆಗಾಗ್ಗೆ ಭೂಕಂಪನ ಸಂಭವಿಸುತ್ತಿರುತ್ತದೆ.
ಇದರ ಪರಿಣಾಮ ದೆಹಲಿ ಮತ್ತು ಎನ್‌ಸಿಆರ್ ಪ್ರದೇಶ ಸೇರಿದಂತೆ ಭಾರತದ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಂಗಳೂರು ನಗರವೋ-ನರಕವೋ, ಕೇಳುವವರಾರು?
ಸದ್ಯ ಹೆಚ್ಚಿನ ಹಾನಿಯಾಗಲಿ, ಸಾವುನೋವುಗಳಾಗಲಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ದೆಹಲಿಯಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದ್ದು, ಹಲವರು ಇದರ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮಿಂಡಾನಾವೊ ದ್ವೀಪದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿತ್ತು. ಮೈತುಮ್ ಪಟ್ಟಣದ ನೈಋತ್ಯಕ್ಕೆ 43 ಕಿ.ಮೀ. ದೂರದಲ್ಲಿ ಭೂಕಂಪನವಾಗಿದೆ. ಸ್ಥಳೀಯ ಅಧಿಕಾರಿಗಳ ಪ್ರಕಾರ, ಯಾವುದೇ ದೊಡ್ಡ ಹಾನಿ ಅಥವಾ ಸಾವುನೋವುಗಳು ಸಂಭವಿಸಿಲ್ಲ.
ಕಳೆದ ಎರಡು ದಿನಗಳಲ್ಲಿ ತಜಕಿಸ್ತಾನದಲ್ಲಿ ಮೂರು ಭೂಕಂಪಗಳು ಸಂಭವಿಸಿವೆ. ಅಲ್ಲದೆ ವರ್ಷದ ಆರಂಭದಲ್ಲಿ ಭೂಕಂಪದಿಂದಾಗಿ ಟಿಬೆಟ್‌ನಲ್ಲಿ ವಿನಾಶಕಾರಿ ಪರಿಸ್ಥಿತಿ ಉದ್ಭವಿಸಿ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.