ಅಂಬೇಡ್ಕರ್ ಅವರು 20ನೇ ಶತಮಾನದಲ್ಲಿ ಹುಟ್ಟಿಬಂದು ಸಹೋದರತ್ವ, ಸಹಬಾಳ್ವೆ, ಸಮಾನತೆಯನ್ನು ಸಾರಿದ ಮಹಾಪುರುಷ. ಹಿಂದೂ ಧರ್ಮದಲ್ಲಿ ಸಮಾನತೆ ಕಾಣದೆ ಸಮಾಜಕ್ಕೆ ಪ್ರೀತಿ, ಕರುಣೆ, ವಿಶ್ವಾಸವನ್ನು ಬಿತ್ತುವ ಬೌದ್ಧಧಮ್ಮವನ್ನು ಅಪ್ಪಿಕೊಂಡರು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಗೌರವಾಧ್ಯಕ್ಷ ಎಂ ಸಿ ಬಸವರಾಜು ತಿಳಿಸಿದರು.
ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಡಾ. ಬಿ ಆರ್ ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆಯಲ್ಲಿ ಅವರ ಫೋಟೋಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಡಾ ಬಿ ಆರ್ ಅಂಬೇಡ್ಕರ್ ಅವರು ಭಾರತಕ್ಕೆ ಸರ್ವರಿಗೂ ಸಮಪಾಲು ಎಂಬ ತತ್ವದಡಿಯಲ್ಲಿ ಸಂವಿಧಾನ ನೀಡಿದ ಶ್ರೇಷ್ಠ ನಾಯಕ. ಶಾಂತಿ ಸಂಕೇತ ಸಾರಿದ ಬೌದ್ಧಧಮ್ಮ ದೀಕ್ಷೆ ಸ್ವೀಕರಿಸುವ ಮೂಲಕ ಹಿಂದೂವಾಗಿ ಹುಟ್ಟಿದ್ದೇನೆ ಹಿಂದೂವಾಗಿ ಸಾಯಲಾರೆ ಎಂಬ ಮಾತನ್ನು ಸಾಬೀತು ಮಾಡಿದರು ಎಂದು ಸಾಹಿತಿ, ಶಿಕ್ಷಕ ಬಿ ವಿ ನಾರಾಯಣ ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಸೋನಿಯಾ, ರಾಹುಲ್ ವಿರುದ್ಧ ಇ.ಡಿ ದೋಷಾರೋಪ ಪಟ್ಟಿ ಸಲ್ಲಿಕೆ: ಮೋದಿ-ಅಮಿತ್ ಶಾ ವಿರುದ್ಧ ಸಿಎಂ ಕಿಡಿ
ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ಸಿ ಶಿವಲಿಂಗಯ್ಯ, ತಾಲೂಕು ಅಧ್ಯಕ್ಷ ಡಿ ಸಿ ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ ಟಿ ಶಿವಕುಮಾರ್ ಉಪಾಧ್ಯಕ್ಷ ಎಂ ಸಿ ಶಿವರಾಜ್, ಅತಗೂರು ವೆಂಕಟಾಚಲಯ್ಯ, ಅಹಿಂದ ಸಂರಕ್ಷಣಾ ವೇದಿಕೆಯ ಸಂಘಟನಾ ಕಾರ್ಯದರ್ಶಿ ಶಶಿ ಕುಮಾರ್ ಪಿ, ಜನಶಕ್ತಿ ಸಂಘಟನೆಯ ನಗರಕೆರೆ ಜಗದೀಶ್, ಉಪಾನ್ಯಾಸಕ ಪೃಥ್ವಿರಾಜ್, ಚಿಕ್ಕಣ್ಣ ಚಾಮನಹಳ್ಳಿ ರಾಚಯ್ಯ, ಸಂತೋಷ್, ಬೂದಗುಪ್ಪೆ ಪುಟ್ಟ, ಪ್ರಸನ್ನ ಹಾಗೂ ಇತರರು ಇದ್ದರು.