ತಣಲ್ ವೃದ್ಧಾಶ್ರಮದಲ್ಲಿರುವ ಹಿರಿಯರಿಗೆ, ನಡೆಯಲು ಅಶಕ್ತರಾದವರಿಗೆ ಆಸರೆ ಆಗುವಂತೆ ಮಾನವೀಯ ಸ್ನೇಹಿತರ ಒಕ್ಕೂಟದ ಕಾರ್ಯಕರ್ತರು ಗಾಲಿ ಕುರ್ಚಿ ನೀಡಿದರು.
ಕೊಡಗು ಜಿಲ್ಲೆ ಮಡಿಕೇರಿಯ ತ್ಯಾಗರಾಜನಗರದಲ್ಲಿರುವ ತಣಲ್ ವೃದ್ಧಾಶ್ರಮದಲ್ಲಿ ಸುಮಾರು 40 ಮಂದಿ ಹಿರಿಯ ಬಡ ಜೀವಗಳಿವೆ. ತಮ್ಮ ಇಳಿ ವಯಸ್ಸಿನಲ್ಲಿ ಆಶ್ರಮದಲ್ಲಿ ಆಶ್ರಯ ಪಡೆಯುತ್ತಿದ್ದು, ನಡೆಯಲು ಅಶಕ್ತರಾಗಿರುವವರಿಗೆ ಒಕ್ಕೂಟದ ಕಾರ್ಯಕರ್ತರು ಸೇರಿ ಗಾಲಿ ಕುರ್ಚಿಗಳನ್ನು ನೀಡಲಾಗಿದೆ” ಎಂದು ತಣಲ್ ಸಂಸ್ಥೆಯ ವಕ್ತಾರ, ಸ್ನೇಹಿತರ ಒಕ್ಕೂಟದ ಪ್ರತಿನಿಧಿ ಮಹಮ್ಮದ್ ಮುಸ್ತಫ ಅವರು ತಿಳಿಸಿದರು.
ಒಕ್ಕೂಟದ ಪ್ರತಿನಿಧಿ ಶಶಿಕುಮಾರ್ ಅವರು ಮಾತನಾಡಿ, “ಸಧ್ಯದಲ್ಲೇ ನಮ್ಮ ಒಕ್ಕೂಟದಿಂದ ತಣಲ್ ಸಂಸ್ಥೆಯ ಎಲ್ಲ ವೃದ್ದರಿಗೆ ಸ್ವೆಟರ್‌ಗಳ ವ್ಯವಸ್ಥೆ ಮಾಡಲಾಗುವುದು. ಒಕ್ಕೂಟದ ಸಮಾಜಮುಖಿ ಕಾರ್ಯಕ್ರಮಗಳಿಗೆ ಸದಸ್ಯರುಗಳು ಕೈಜೋಡಿಸಬೇಕು” ಎಂದು ಕೋರಿಕೊಂಡರು.
ಈ ಸುದ್ದಿ ಓದಿದ್ದೀರಾ? ಬಿಗ್ ಬ್ರೇಕಿಂಗ್ | ಅನ್ನಭಾಗ್ಯ: ಅಕ್ಕಿ ಬದಲು ಹಣ ನೀಡಲು ಸರ್ಕಾರ ನಿರ್ಧಾರ
ಸ್ನೇಹಿತರ ಒಕ್ಕೂಟದ ಪ್ರತಿನಿಧಿ ಮಾಜಿ ಯೋಧ ಡೇವಿಡ್ ವೇಗಸ್ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಸ್ನೇಹಿತರ ಒಕ್ಕೂಟವು ಬಡವರ ಸೇವಾ ಕಾರ್ಯದಲ್ಲಿ ಚುರುಕಾಗುತ್ತಿರುವುದು ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುಂದುವರಿಯಂತಾಗಲಿ” ಎಂದು ಹಾರೈಸಿದರು.