ಸುಪ್ರೀಂ ಕೋರ್ಟ್‌ನ ಮುಂದಿನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಬಿ ಆರ್ ಗವಾಯಿ ಅವರು ನೇಮಕವಾಗಲಿದ್ದಾರೆ. ಹಾಲಿ ಮುಖ್ಯ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಅವರ ಅವಧಿ ಮೇ 13ಕ್ಕೆ ಕೊನೆಗೊಳ್ಳಲಿದ್ದು, ಮೇ.14 ರಂದು ಗವಾಯಿ ಅವರು ಮುಖ್ಯ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಅವರು ಬಿ ಆರ್ ಗವಾಯಿ ಅವರ ಹೆಸರನ್ನು ಶಿಫಾರಸ್ಸುಗೊಳಿಸಿದ್ದಾರೆ. ಇದಕ್ಕೂ ಮೊದಲು ಸುಪ್ರೀಂ ಕೋರ್ಟ್‌ನ ಮುಂದಿನ ನೂತನ ಮುಖ್ಯ ನ್ಯಾಯಮೂರ್ತಿಗಳ ಹೆಸರನ್ನು ಅಂತಿಮಗೊಳಿಸುವಂತೆ ಕೇಂದ್ರ ನ್ಯಾಯಾಂಗ ಇಲಾಖೆ ಸಿಜೆಐ ಖನ್ನಾ ಅವರನ್ನು ಕೇಳಿಕೊಂಡಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಂಗಳೂರು ನಗರವೋ-ನರಕವೋ, ಕೇಳುವವರಾರು?
ಗವಾಯಿ ಅವರು 52ನೇ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ಮೇ 14 ರಿಂದ ನವೆಂಬರ್ 2025ರ ವರೆಗೂ ಅಧಿಕಾರ ನಿರ್ವಹಿಸಲಿದ್ದಾರೆ. ಬಿ ಆರ್ ಗವಾಯಿ ಅವರು 2019 ಮೇ 24 ರಂದು ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು.
ಮಹಾರಾಷ್ಟ್ರದ ಅಮರಾವತಿಯಲ್ಲಿ 1960, ನವೆಂಬರ್ 24 ರಂದು ಜನಿಸಿದ ಗವಾಯಿ ಅವರು ಬಿಹಾರ ಹಾಗೂ ಕೇರಳದ ರಾಜ್ಯಪಾಲರಾದ ಆರ್ ಎಸ್ ಗವಾಯಿ ಅವರ ಪುತ್ರ.