ಪ್ರವೇಶ: ‘ಮೈಸೂರು ರಾಜ್ಯ’ವು ಅಧಿಕೃತವಾಗಿ ‘ಕರ್ನಾಟಕ ರಾಜ್ಯ’ವಾದ ನಂತರದ ಐವತ್ತು ವರ್ಷಗಳಲ್ಲಿ ‘ಬಲಪಂಥೀಯ ಶಕ್ತಿ’ಗಳ ಬಲವೃದ್ಧಿಯ ಮಾಪನವನ್ನು, ವರ್ತಮಾನದ ಸನ್ನಿವೇಶದ ಕಣ್ಣೋಟದಲ್ಲಿ ಮಾಡಬೇಕಾದ್ದು ಅನಿವಾರ್ಯವೇ. ಆದರೆ ವರ್ತಮಾನದ ಕರ್ನಾಟಕದಲ್ಲಿ, ತೀವ್ರ ಬಲಪಂಥದ ಸಂಘಟನೆಗಳ ಕೂಟವಾದ ‘ಸಂಘ ಪರಿವಾರ’ದ ಕಾರ್ಯಚಟುವಟಿಕೆ ಮತ್ತು ಪ್ರಭಾವವು ಸಮಾಜದಲ್ಲಿ ವ್ಯಾಪಕವಾಗಿ ಹಬ್ಬಿ, ಬಲಪಂಥವು ಯಾವ ಪಕ್ಷದ ರಾಜ್ಯಾಡಳಿತವಿದ್ದರೂ ತನ್ನ ಸೊಕ್ಕನ್ನು ಅಂಕೆ ಇಲ್ಲದೆ ಉಕ್ಕಿಸುವ ಬಲ ಪಡೆದ ಸ್ಥಿತಿ ತಲುಪಿರುವುದರಿಂದ, 1973ಕ್ಕಿಂತ ಹಿಂದಿನ 50 ವರ್ಷಗಳಲ್ಲಿ ಬಲಪಂಥದ ಬೇರೂರಿದ ಬಗೆಯನ್ನು ಗಮನಿಸುವುದು ಅವಶ್ಯಕವೆಂದು…

ಕೆ. ಫಣಿರಾಜ್
ಫಣಿರಾಜ್ ಅವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರು. 35 ವರ್ಷಗಳ ಕಾಲ ಮಣಿಪಾಲದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇಷ್ಟ್ರಾಗಿದ್ದು ವೃತ್ತಿ ವಿಶ್ರಾಂತಿ ಪಡೆದಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದ ಎಡ-ದಲಿತ ಚಳವಳಿಗಳ ಸಂಗಾತಿಯಾಗಿದ್ದಾರೆ