ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ವತಿಯಿಂದ 134ನೇ ಡಾ.ಬಿಆರ್ ಅಂಬೇಡ್ಕರ್ ಜಯಂತಿಯನ್ನು ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ವಿಶೇಷವಾಗಿ ಮಹಿಳೆಯರು ಸೇರಿದಂತೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮುಖಂಡರು, “ಸಂವಿಧಾನ ಶಿಲ್ಪಿ, ವಿಶ್ವ ಜ್ಞಾನಿ ಅಂಬೇಡ್ಕರ್ ಸಂವಿಧಾನ ರಚಿಸಿ ಎಲ್ಲರಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮಹಾ ತ್ಯಾಗ ಮಾಡಿದ ಮಹಾ ಜ್ಞಾನಿ. ತಮ್ಮ ಜೀವನದಲ್ಲಿ ಅವರು ಏನೆಲ್ಲಾ ಕಳೆದುಕೊಂಡರೂ ಛಲ ಬಿಡದೆ ದಲಿತ, ಶೋಷಿತ ಸಮುದಾಯಗಳಿಗೆ ನ್ಯಾಯ, ಸಮಾನತೆ ಒದಗಿಸುವ ನಿಟ್ಟಿನಲ್ಲಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ದಲಿತರ ಸ್ವಾಭಿಮಾನದ ಹೆಗ್ಗುರುತು ಅಂಬೇಡ್ಕರ್. ಅವರ ದಾರಿಯಲ್ಲಿ ನಾವೆಲ್ಲರೂ ನೆಡೆಯಬೇಕು” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ ? ಚಿತ್ರದುರ್ಗ | ಹಸಿದವರು ಕಾಂತರಾಜ್ ವರದಿ ಜಾರಿಗಾಗಿ ಕಾಯುತ್ತಿದ್ದಾರೆ, ಹೊಟ್ಟೆ ತುಂಬಿದವರು ವಿರೋಧಿಸುತ್ತಾರೆ ; ಈಶ್ವರಾನಂದಪುರಿ ಶ್ರೀ
ಕಾರ್ಯಕ್ರಮದಲ್ಲಿ ಮುಖಂಡರಾದ ಪ್ರದೀಪ್, ಗಿಡ್ಡ ರಂಗಪ್ಪ, ಸಿದ್ದಬಸಪ್ಪ, ಮಧುಸೂದನ, ತಿಪ್ಪೇಸ್ವಾಮಿ, ತಿಪ್ಪೇಶ್, ಶಾಮಿಯಾನ ರಾಮಣ್ಣ, ನಾಗರಾಜ್, ಯೋಗೀಶ್, ಮಹಾಂತೇಶ, ರವಿ, ಎಂ ಶ್ರೀಧರ್, ಮಂಜುನಾಥ್, ನಾಗೇಂದ್ರ, ಬಸವರಾಜು, ನಾಗೇಂದ್ರಪ್ಪ, ನಾಗಮ್ಮ, ಹೊನ್ನಮ್ಮ, ತಿಪ್ಪಮ್ಮ, ಸಾಕಮ್ಮ, ಶರಣಮ್ಮ, ಗಂಗಮ್ಮ, ರತ್ನಮ್ಮ ಸೇರಿದಂತೆ ಹಲವು ಮಹಿಳೆಯರು, ಭಾಗವಹಿಸಿದ್ದರು.
ಇಲ್ಲಿ ಯಾವುದೇ ಭೀಮ್ ಆರ್ಮಿ ವತಿಯಿಂದ ಡಾ ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆಯಾಗಿರುವುದಿಲ್ಲ ಸುದ್ದಿಯನ್ನು ಪರಾಮರ್ಶಿಸಿ ಬರೆಯರಿ ಇಲ್ಲ ಖಚಿತ ಪಡಿಸಿಕೊಂಡು ಸುದ್ದಿಯನ್ನು ಬಿತ್ತರಿಸಬೇಕು ಸರ್ ಗ್ರಾಮದಲ್ಲಿ ಅಂಬೇಡ್ಕರ್ ಯುವಕರಿಂದ ವಾರಗಟ್ಟಲೇ ಶ್ರಮ ಹಾಕಿ ಕಾರ್ಯಕ್ರಮ ಮಾಡಿರುವುದು