ಕಂಬದ ಮೇಲೆ ಹತ್ತಿ ವಿದ್ಯುತ್ ಕಾರ್ಯ ನಿರ್ವಹಿಸುವಾಗ ಏಕಾಏಕಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಘಟನೆ ಮಾನ್ವಿ ತಾಲ್ಲೂಕಿನ ಹಿರೇಕೊಟ್ನೆಕಲ್ ಗ್ರಾಮದಲ್ಲಿ ನಡೆದಿದೆ.
ಮಹಮ್ಮದ್ ರಫಿ (45) ಮೃತಪಟ್ಟಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ.
ಹಿರೇಕೊಟ್ನೆಕಲ್ ಗ್ರಾಮದ ವಿದ್ಯುತ್ ಸಮಸ್ಯೆಯಾಗಿರುವುದರಿಂದ ಜೆಸ್ಕಾಂ ಸಿಬ್ಬಂದಿ ತಾನು ಕಂಬದ ಮೇಲೆ ಹತ್ತದೆ ಖಾಸಗಿ ಲೈನ್ ಮ್ಯಾನ್ ವನ್ನು ಸಹಾಯಕ್ಕೆ ಕರೆದು ಅವನನ್ನು ಕಂಬದ ಹತ್ತಿಸಿ ಕೆಲಸ ನಿರ್ವಹಿಸುವಾಗ ವಿದ್ಯುತ್ ಸ್ಪರ್ಶಿಸಿ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬೆಲೆ ಏರಿಕೆ ವಿರುದ್ಧ ಸಿಪಿಐಎಂಎಲ್ ಪ್ರತಿಭಟನೆ
ಮೃತ ಕುಟುಂಬಸ್ಥರು ಹಾಗೂ ಸಾಮಾಜಿಕ ಹೋರಾಟಗಾರರು ಗುಲ್ಬರ್ಗಾ ವಿದ್ಯುತ್ ಸರಬರಾಜು ಮಾನ್ವಿ ಘಟಕ ಕಚೇರಿ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.
ಹಲವು ಬಾರಿ ಹಿಂದೆ ಜೆಸ್ಕಾಂ ಸಿಬ್ಬಂದಿಗಳು ಸಹಾಯಕ್ಕೆ ಖಾಸಗಿ ಲೈನ್ ಮ್ಯಾನ್ ಗಳನ್ನೂ ಸಹಾಯಕ್ಕೆ ಬಳಸಿಕೊಳ್ಳುತ್ತಿದ್ದರು. ಇಂತಹ ಪ್ರಕರಣಗಳು ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದರು ಸಾಕ್ಷಿ ಸಮೇತ ವಿಡಿಯೋ ತೋರಿಸಿ ಎಂದು ಉಡಾಫೆ ಉತ್ತರ ನೀಡುತ್ತಿದ್ದರು ಎಂದು ಸ್ಥಳೀಯ ಹೋರಾಟಗಾರ ಜಾವೀದ್ ಖಾನ್ ಆರೋಪಿಸಿದರು.
ಮೃತ ಕುಟುಂಬಕ್ಕೆ 25 ಲಕ್ಷ್ಯ ಪರಿಹಾರ ಹಾಗೂ ಮೃತ ಪತ್ನಿಯನ್ನು ಡಿ ಗ್ರೂಪ್ ಗೆ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.