ಜಿಲ್ಲೆಯಲ್ಲಿ ಹತ್ತಿ ಬೀಜ ಹಾಗೂ ರಸಗೊಬ್ಬರಗಳ ಮಾರಾಟದಲ್ಲಿ ವ್ಯಾಪಾರಿಗಳು ರೈತರಿಗೆ ದುಬಾರಿ ಬೆಲೆಗೆ ಮಾರಾಟ ಮಾಡಿ ವಂಚನೆ ಮಾಡುತ್ತಿದ್ದು, ಕೃಷಿ ಇಲಾಖೆ ಈ ಬಗ್ಗೆ ಸಭೆ ನಡೆಸಿ ಕ್ರಮ ವಹಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಹತ್ತಿ ಬೀಜ 850 ಎಂ.ಆರ್.ಪಿ ಇರುವ ಒಂದು ಪ್ಯಾಕೆಟ್ ಹತ್ತಿ ಬೀಜ 1500 ರಿಂದ 2000 ಮಾರಾಟ ಮಾಡಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ.ಈ ಬಗ್ಗೆ ಜಿಲ್ಲೆಯ ಎಲ್ಲಾ ಕೃಷಿ ಇಲಾಖೆ ಸಹಾಯಕ ಅಧಿಕಾರಿಗೊಂದಿಗೆ ಸಭೆ ನಡೆಸಿ ಚರ್ಚಿಸಬೇಕು. ಜಿಲ್ಲೆಯಲ್ಲಿ ಬೀಜ ಮತ್ತು ರಸಗೊಬ್ಬರ ಮತ್ತು ತೆರಿಗೆ ವಿನಾಯಿತಿಯಲ್ಲಿ ರಸ ಗೊಬ್ಬರ ಅಂಗಡಿ ಮಾಲೀಕರು ಸರ್ಕಾರಕ್ಕೆ ಸಾಕಷ್ಟು ವಂಚನೆ ಮಾಡಿ ಹೆಚ್ಚಿನ ದರಗಳಿಗೆ ಬೀಜವನ್ನು ಮಾರಾಟ ಮಾಡಿ ಬಿಲ್‌ನಲ್ಲಿ ಕಡಿಮೆ ಹಣವನ್ನು ಹಾಕುತ್ತಿದ್ದಾರೆ, ಬಿಲ್ ಸಹ ಕೊಡು ವುದಿಲ್ಲವೆಂದು ಹೇಳುತ್ತಿದ್ದು, ಇದರಿಂದ ರೈತರಿಗೆ ವಂಚನೆಯಾಗುತ್ತಿದೆ ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಂಬದ ಮೇಲೆ ಹತ್ತಿದಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು
ರಸಗೊಬ್ಬರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗೊಬ್ಬರ ಒಬ್ಬರಿಗೆ 5 ರಿಂದ 10 ಚೀಲ ಮಾತ್ರ ನೀಡುತ್ತಿದ್ದು, ರಸಗೊಬ್ಬರವನ್ನು ರಾತೋ ರಾತ್ರಿ ಖಾಸಗಿ ಅಂಗಡಿಗಳಿಗೆ ಮಾರಾಟ ಮಾಡುತಿದ್ದಾರೆ ಎಂದು ದೂರಿದರು.
ಜಿಲ್ಲೆಯಲ್ಲಿ ಹಾಕಿ ನಕಲಿ ಕ್ರಿಮಿನಾಶಕ ಮಾರಾಟ ಮಾಡುತ್ತಿದ್ದು ನಕಲಿ ಕ್ರಿಮಿನಾಶಗಳಿಗೆ ಬಿಳಿ ಚೀಟಿ ಯಲ್ಲಿ ಬರೆದುಕೊಡುತ್ತಿದ್ದು, ರೈತರಿಗೆ ಹಾಗೂ ಸರ್ಕಾರಕ್ಕೆ ಸಾಕಷ್ಟು ವಂಚನೆ ಯಾಗುತ್ತಿದೆ. ಜಿಲ್ಲಾಧಿಕಾರಿಗಳು ಅಧಿಕಾರಿಗ ಳೊಂದಿಗೆ ಸಭೆ ನಡೆಸಿ ರೈತರಿಗೆ ಸರಿಯಾದ ದರದಲ್ಲಿ ಬೀಜ ಮತ್ತು ರಸಗೊಬ್ಬರ ಅನುಕೂಲ ಮಾಡಿಸಿಕೊ ಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶಿವುಪುತ್ರಪ್ಪ ನಂದಿಹಾಳ, ಮಲ್ಲೇಶ ನಾಯಕ, ಬಸವರಾಜ ಗೋಡಿಹಾಳ, ವೀರನಗೌಡ, ವೈ.ದುರ್ಗಾದೇವಿ, ಸೇರಿದಂತೆ ಅನೇಕರು ಇದ್ದರು.
