ವಕ್ಫ್ ಹೋರಾಟ: ಸಾರ್ವಜನಿಕರಲ್ಲಿ ಸತ್ಯದ ಅರಿವು ಮೂಡಿಸುವಂತೆ ಮುಸ್ಲಿಂ ಬಾಂಧವ್ಯ ವೇದಿಕೆ ಸಲಹೆ

Date:

Advertisements

ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟ- ಪ್ರತಿಭಟನೆಗಳಲ್ಲಿ ಮುಸ್ಲಿಂ ಸಮುದಾಯ ಅನುಸರಿಸಬೇಕಾದ ನೀತಿಗಳು

1 ಕೇಂದ್ರ ಸರ್ಕಾರ, ಮಾಧ್ಯಮ ಮತ್ತು ಕೋಮುವಾದಿ ಸಂಘಟನೆಗಳು ಮುಸ್ಲಿಮರ ವಕ್ಫ್ ಮಸೂದೆ ವಿರೋಧಿ ಹೋರಾಟವನ್ನು ಹಿಂದೂ ವಿರೋಧಿ ಎಂದು ಬಿಂಬಿಸುವ ಪ್ರಯತ್ನದಲ್ಲಿವೆ ಎನ್ನುವುದನ್ನು ಮರೆಯದಿರಿ..

2 ಮುಸ್ಲಿಮರು ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬುದನ್ನು ಇತರ ಸಮುದಾಯಗಳಿಗೆ, ವಕ್ಫ್ ಮಸೂದೆಯಲ್ಲಿರುವ ತಾರತಮ್ಯ ಮತ್ತು ದಮನಕಾರಿ ನೀತಿಗಳನ್ನು ತೋರಿಸಿ ಪರಿಣಾಮಕಾರಿಯಾಗಿ ಮನವರಿಕೆ ಮಾಡಿರಿ..

Advertisements

3 ಪ್ರತಿ ಮಸೀದಿಯ ವತಿಯಿಂದ ಸಾರ್ವಜನಿಕರಿಗಾಗಿ ಕರಾಳ ವಕ್ಫ್ ಮಸೂದೆಯ ಕುರಿತಾದ ಮಾಹಿತಿ ಪತ್ರಗಳನ್ನು ಮುದ್ರಿಸಿ ಹಂಚಿರಿ..

4 ವಕ್ಫ್ ಹೋರಾಟದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಗಮನವಿರಿಸಿರಿ..

5 ಸರ್ಕಾರದ ವಿರುದ್ಧ ಘೋಷಣೆ ಕೂಗುವ ಸಂದರ್ಭದಲ್ಲಿ ಅವಾಚ್ಯ ಶಬ್ದಗಳು, ಸಮುದಾಯಗಳ ವಿರೋಧಿ ಮತ್ತು ಅಸಂಬದ್ಧ ವಾಕ್ಯಗಳನ್ನು ಉಪಯೋಗಿಸದಿರಿ..

6 ಪ್ರತೀ ತಾಲೂಕುಗಳಲ್ಲಿ ತಂಡವನ್ನು ರಚಿಸಿ ಸಮುದಾಯದ ನುರಿತ ನ್ಯಾಯವಾದಿಗಳ ಮೂಲಕ ವಕ್ಫ್ ಕಾಯ್ದೆಯಿಂದ ಸಮುದಾಯಕ್ಕಾದ ಅನ್ಯಾಯ ಮತ್ತು ತಾರತಮ್ಯದ ಬಗ್ಗೆ ಸೂಕ್ತ ಜ್ಞಾನವನ್ನು ಪಡೆದುಕೊಂಡು ಅನ್ಯ ಸಮುದಾಯಗಳಿಗೆ ಸಜ್ಜನಿಕೆಯಿಂದ ವಿವರಿಸಿರಿ..

7 ಹೋರಾಟ ಮತ್ತು ಪ್ರತಿಭಟನೆಗಳು ಸಾರ್ವಜನಿಕರು ಮೆಚ್ಚುವಂತೆ ಮತ್ತು ವಿಷಯ ಮನವರಿಕೆಯಾಗುವಂತೆ ಇರಲಿ..

8 ಪ್ರತಿಭಟನೆಯಲ್ಲಿ ಸಹಕಾರ ನೀಡುವಂತೆ ಸಮುದಾಯದ ಹಿರಿಯರು ಮತ್ತು ಪ್ರಮುಖರು ಸೇರಿ ಇತರ ಸಮುದಾಯದ ಜಾತ್ಯತೀತ ಮುಖಂಡರಿಗೆ ವೈಯುಕ್ತಿಕ ಭೇಟಿ ಮಾಡಿ ಮನವಿ ಮಾಡಿರಿ..

9 ನೂತನ ಮಸೂದೆಯ ಹಿಂದಿರುವ ಸರ್ಕಾರದ ಹುನ್ನಾರದ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಲು ಸಭೆ ಸಮಾರಂಭಗಳನ್ನು ವ್ಯಾಪಕವಾಗಿ ಆಯೋಜಿಸಿರಿ..

10 ಮುಸ್ಲಿಂ ದ್ವೇಷದ ಹಿಂದಿರುವ ಸರ್ಕಾರದ ರಾಜಕೀಯ ಉದ್ದೇಶವನ್ನು ಸೂಕ್ತ ಅಧ್ಯಯನ ನಡೆಸಿ ಕರಪತ್ರ , ಭಾಷಣ ಮತ್ತು ಭಾವೈಕ್ಯ ಸಭೆಗಳ ಮೂಲಕ ತಿಳಿಯಪಡಿಸಿರಿ..

11 ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್ ಫೇಸ್ ಬುಕ್ ನಲ್ಲಿ ವಕ್ಫ್ ಸಂಬಂಧಿತವಾಗಿ ಮುಸ್ಲಿಮರ ವಿರುದ್ಧ ಅಪಪ್ರಚಾರ ಮಾಡುವ ವ್ಯಕ್ತಿ ಮತ್ತು ಪೇಜ್ ಗಳ ಮೇಲೆ ಗಮನವಿಟ್ಟು ಸಾರ್ವಜನಿಕರಿಗೆ ತಪ್ಪು ಮಾಹಿತಿ ಹರಡದಂತೆ ನೋಡಿಕೊಳ್ಳಿರಿ..

12 ಬರೀ ವಕ್ಫ್ ಮಸೂದೆ ಮಾತ್ರವಲ್ಲದೆ, ಈ ಹಿಂದಿನ ತಲಾಖ್ ಮಸೂದೆಯ ಕುರಿತು ಸರ್ಕಾರ ಮಾಡಿದ ಕುತಂತ್ರ ಮತ್ತು ಪ್ರಸ್ತುತ ಪ್ರಕರಣಗಳ ಸಂಖ್ಯೆಯನ್ನು ಸಾರ್ವಜನಿಕ ವಲಯದಲ್ಲಿ ಪ್ರಕಟಿಸಿರಿ..

13 ಮಾಧ್ಯಮಗಳ ಮುಂದೆ ಮಾತನಾಡುವಾಗ ಹೆಚ್ಚಿನ ಜಾಗ್ರತೆ ವಹಿಸಿ. ಕೆಲವು ಮಾಧ್ಯಮಗಳು ನಿಮ್ಮ ತಪ್ಪುಗಳನ್ನು ಬಯಸುತ್ತವೆ ಎಂಬುದನ್ನು ಮರೆಯದಿರಿ..

14 ವಿಷಯ ಜ್ಞಾನ ಇರುವವರು ಮಾತ್ರ ವಕ್ಫ್ ವಿಚಾರದಲ್ಲಿ ಸಾರ್ವಜನಿಕ ಭಾಷಣಗಳನ್ನು ಮಾಡಿರಿ..

15 ಪ್ರತಿಭಟನೆಯ ಸಂಧರ್ಭದಲ್ಲಿ ದೇಶದ ಬಾವುಟ ಮಾತ್ರ ಬಳಸಿ..

16 ಯಾವುದೇ ಸಮುದಾಯದ ಪ್ರಾರ್ಥನಾ ಸ್ಥಳಗಳ ಮುಂದೆ ಘೋಷಣೆ ಕೂಗುವುದಾಗಲಿ ಮತ್ತು ಪ್ರತಿಭಟನೆ ಮಾಡುವುದಾಗಲಿ ಮಾಡಬೇಡಿರಿ..

17 ವಕ್ಫ್ ಕುರಿತಾಗಿ ಮಸೀದಿಗಳಲ್ಲಿ ಕಿರುಚುವ ಶೈಲಿಯಲ್ಲಿ ಭಾಷಣಪ್ರವಚನ ಮಾಡದಿರಿ. ಉರ್ದು, ಮಲಯಾಳಂ, ಬ್ಯಾರಿ ಭಾಷೆಗಳು ಅರ್ಥವಾಗದವರಿಗೆ ಇದು ತಪ್ಪು ಗ್ರಹಿಕೆಗಳಿಗೆ ಒಳಪಡಿಸುವ ಸಾಧ್ಯತೆಗಳಿವೆ..

18 ಕೇಂದ್ರ ಸರಕಾರದ ಕರಾಳ ವಕ್ಫ್ ತಿದ್ದುಪಡಿ ಕಾಯ್ದೆಯಿಂದಾಗಿ ಸಮಸ್ತ ಮುಸ್ಲಿಂ ಸಮುದಾಯ ತೊಂದರೆಗೊಳಗಾಗಿದೆ. ಇಂತಹ ಸಂದರ್ಭದಲ್ಲಿ ಒಗ್ಗಟ್ಟಿನಲ್ಲಿರಿ. ಸುನ್ನಿ , ಸಲಫಿ , ತಬ್ಲಿಗಿ , ಅಹ್ಲೆ ಹದಿತ್ , ಜಮಾತೆ ಇಸ್ಲಾಮಿ , ಶಿಯಾ , ಎಸ್ ಡಿ ಪಿ ಐ, ಜೆ ಡಿ ಎಸ್ , ಕಾಂಗ್ರೆಸ್ , ಬ್ಯಾರಿ , ಉರ್ದು , ನವಾಯಿತಿ ಮಲಯಾಳಂ , ದಾಲ್ದಿ ಎಂಬ ಧಾರ್ಮಿಕ, ರಾಜಕೀಯ ಮತ್ತು ಭಾಷೆಗಳ ಆಧಾರದ ಮೇಲೆ ಪಂಗಡವಾಗಿ ವಿಂಗಡಿತರಾಗದಿರಿ ಮತ್ತು ಇಂತಹ ವಾದ ಅಥವ ಭಿನ್ನತೆಗಳನ್ನು ಪ್ರತಿಭಟನೆಗಳ ಸಂದರ್ಭದಲ್ಲಿ ಪ್ರೋತ್ಸಾಹಿಸಬೇಡಿ..

19 ಪ್ರತಿಭಟನೆಗಳ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಮನವಿ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಿರಿ. ಭಿನ್ನಾಭಿಪ್ರಾಯ ಮೂಡಿದರೆ ಸಂಯಮ ವಹಿಸಿರಿ..

20 ಹೋರಾಟ ಅಥವ ಪ್ರತಿಭಟನೆಗಳು ಪರಿಣಾಮಕಾರಿಯಾಗದಿದ್ದರೆ ಕೇಂದ್ರ ಸರಕಾರವು ಭವಿಷ್ಯದಲ್ಲಿ ಮತ್ತಷ್ಟು ಮುಸ್ಲಿಂ ವಿರೋಧಿ ಕಾಯ್ದೆ-ಕಾನೂನುಗಳನ್ನು ತರಲಿದೆ ಎಂಬ ವಾಸ್ತವ ತಿಳಿದಿರಲಿ..

ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X