ವಿದ್ಯುತ್ ತಂತಿ ತಗುಲಿ ಭತ್ತದ ಬಣವೆ ಹಾಗೂ ಕೂಡಿಟ್ಟಿದ್ದ ಕಟ್ಟಿಗೆಗಳು ಸುಟ್ಟು ಭಸ್ಮವಾಗಿರೋ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ನಡೆದಿದೆ.
ವಾರದ ಹಿಂದಷ್ಟೇ ನಡೆದಿದ್ದ ಭಯಾನಕ ವಿದ್ಯುತ್ ಅವಘಡ ಮಾಸುವ ಮುನ್ನವೇ ಮತ್ತೆ ವಿದ್ಯುತ್ ತಂತಿ ಗಿಡಗಳಿಗೆ ತಗುಲಿ ಈ ಘಟನೆ ಸಂಭವಿಸಿದ್ದು, ಸದ್ಯ ಗ್ರಾಮಸ್ಥರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಗ್ರಾಮಸ್ಥರು ಕೂಡ ಸಾಥ್ ನೀಡಿ ಬಿಂದಿಗೆ ಹಾಗೂ ಹ್ಯಾಂಡ್ ಪಂಪ್‌ನಿಂದ ನೀರು ತಂದು ಬೆಂಕಿ ಆರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಕಳೆದ ವಾರ ನಡೆದ ಘಟನೆಗೆ ಎಚ್ಚೆತ್ತು ಕೆಲಸ ಮಾಡಿದ ಜೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ತಂತಿಗೆ ಅಂಟಿಕೊಂಡ ಗಿಡ ಮರಗಳ ಹಾಗೂ ಜಾಲಿ ಗಿಡಗಳ ಸ್ವಚ್ಛತೆ ಮಾಡಿದರೆ ತುಂಬಾ ಅನುಕೂಲವಾಗ್ತಿತ್ತು ಎಂದು ಗ್ರಾಮಸ್ಥರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಯಾದಗಿರಿ | ಭೀಕರ ಅಪಘಾತ; ದೇವಸ್ಥಾನಕ್ಕೆ ಹೊರಟಿದ್ದ ನಾಲ್ವರು ದುರ್ಮರಣ
ಇನ್ನು ಮನೆಯ ಪಕ್ಕದಲ್ಲೇ ಇದ್ದ ಬಣವೆ ಹೊತ್ತಿ ಉರಿದಿದ್ದು, ಮನೆಯಲ್ಲಿದ್ದ ಜನರು ಆತಂಕಗೊಂಡಿದ್ದಾರೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.