ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ವಾಹನ ಹಳ್ಳದ ಬ್ರಿಡ್ಜ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ನಾಲ್ವರು ದುರ್ಮರಣ ,ಹಲವರಿಗೆ ಗಾಯಗೊಂಡಿರುವ ಘಟನೆ ದೇವದುರ್ಗ ತಾಲ್ಲೂಕಿನ ಅಮರಾಪುರ ಗ್ರಾಮದ ಹತ್ತಿರ ನಡೆದಿದೆ.
ಮೃತ ಹೆಸರು ತಿಳಿದುಬಂದಿಲ್ಲ.ನಾಗರಾಜ ,ನಾಗಭೂಷಣ ,ಮುರುಳಿ ,ಆನಂದ ತೀವ್ರ ಗಾಯಗೊಂಡು ರಾಯಚೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.ಅಪಘಾತಗೊಳ್ಳಗಾದ ಗಾಯಾಳುಗಳು ಹಾಗೂ ಮೃತರು ತೆಲಂಗಾಣ ರಾಜ್ಯದ ಹಿಂದೂಪುರ ನಿವಾಸಿಗಳು ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ದೇವಸ್ಥಾನ ಅತಿಕ್ರಮಣ ವಿಚಾರ ಗಲಾಟೆ ; ಓರ್ವ ವ್ಯಕ್ತಿಗೆ ಗಂಭೀರ ಗಾಯ
ಕುರಿ ಖರೀದಿಸಲು ತೆಲಂಗಾಣದ ರಾಜ್ಯದ ಹಿಂದೂಪುರ ಗ್ರಾಮದಿಂದ ಯಾದಗಿರಿ ಜಿಲ್ಲೆ ಶಹಾಪುರ ಪಟ್ಟಣಕ್ಕೆ ಕುರಿ ವ್ಯಾಪಾರಕ್ಕಾಗಿ ತೆರಳಿದ್ದರು. ಬೆಳಗಿನ ಜಾವ 3 ಗಂಟೆ ಸುಮಾರು ಚಾಲಕನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ ಎನ್ನಲಾಗಿದೆ.
ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.