ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ಏ.20ರಂದು ವಾಹನ ಚಾಲಕರಿಗಾಗಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಅವರ 50ನೇ ಜನ್ಮ ವರ್ಷಾಚರಣೆ ಅಂಗವಾಗಿ ಉದ್ಯೋಗ ಸಮೃದ್ಧಿ ಕೇಂದ್ರ ಹಾಗೂ ಬೆಂಗಳೂರಿನ ಪ್ರತಿಷ್ಠಿತ ಬಿವಿಜಿ ಸಂಸ್ಥೆಯ ಆಶ್ರಯದಲ್ಲಿ ಏ.20 ರಂದು ಬೆಳಗ್ಗೆ 10 ಗಂಟೆಗೆ ಹಾನಗಲ್‌ನ ಗುರುಭವನದ ಪರಿವರ್ತನ ಕಲಿಕಾ ಕೇಂದ್ರದಲ್ಲಿ ಉದ್ಯೋಗ ಮೇಳ ನಡೆಯಲಿದೆ.
ಮೇಳದಲ್ಲಿ ಹೆವಿ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ವಾಹನ ಚಾಲಕರು ಭಾಗವಹಿಸಿ ಸ್ಥಳದಲ್ಲಿಯೇ ಉದ್ಯೋಗ ಗಿಟ್ಟಿಸಿಕೊಳ್ಳಬಹುದು. ಬೆಂಗಳೂರು ಮಹಾನಗರದಲ್ಲಿ ಎಲೆಕ್ಟ್ರಿಕ್ ಎಸಿ ಬಸ್ ಓಡಿಸಲು ಬಿವಿಜಿ ಸಂಸ್ಥೆ ಚಾಲಕರನ್ನು ನೇಮಿಸಿಕೊಳ್ಳಲಿದೆ. ಪ್ರತಿ ತಿಂಗಳು 28,725 ರೂ. ವೇತನ, ಇಎಸ್‌ಐ, ಪಿಎಫ್, ಇನ್ಶೂರೆನ್ಸ್ ಸೇರಿದಂತೆ ಇತರ ಸೌಲಭ್ಯಗಳು ಸಿಗಲಿವೆ.
ಹೆಚ್ಚಿನ ಮಾಹಿತಿಗೆ ಗಿರೀಶ, ಉದ್ಯೋಗ ಸಮೃದ್ಧಿ ಕೇಂದ್ರ, ಗುರುಭವನ ಹಾನಗಲ್ ಮೊ. 6361154867 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಹಾವೇರಿ | ಮಹಾವೀರರ ಬದುಕು ಮತ್ತು ಬೋಧನೆಗಳು ಸರ್ವಕಾಲಕ್ಕೂ ಆದರಣೀಯ