ಡಾ. ಬಿ ಆರ್ ಅಂಬೇಡ್ಕರ್ ಕೇವಲ ದಲಿತರ, ಹಿಂದುಳಿದ ವರ್ಗದವರ ಮಾತ್ರವಲ್ಲ ಭವ್ಯ ಭಾರತದ ಭವಿಷ್ಯದ ಪ್ರಜೆಗಳ ನಾಯಕರಾಗಿದ್ದರು ಎಂದು ವಿಜಯಪುರದ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಕಲ್ಲಪ್ಪ ತೊರವಿ ಹೇಳಿದರು.
ನಗರದ ಹೊರವಲಯದ ಕೃಷಿ ಮಹಾವಿದ್ಯಾಲಯದಲ್ಲಿ ಜರುಗಿದ ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಅಂಬೇಡ್ಕರರು ಭಾರತದ ಏಕತೆ, ವೈವಿಧ್ಯತೆ ಮತ್ತು ಸಮಗ್ರತೆ ಬಗ್ಗೆ ಹೆಮ್ಮೆ ಮೂಡಿಸಿದ್ದಾರೆ. ರಚನೆಯಾಗಿ 73 ವರ್ಷ ಕಳೆದರೂ ಸಂವಿಧಾನದ ಮೂಲಸ್ವರೂಪ ತಿದ್ದುಪಡಿಗೊಳಗಾಗದೇ ಹಾಗೆಯೇ ಉಳಿದಿರುವುದು ನಮ್ಮ ದೇಶದಲ್ಲಿ ಮಾತ್ರ. ಇದಕ್ಕೆ ಕಾರಣ ಅಂಬೇಡ್ಕರ್ ಅವರ ಅಧ್ಯಯನಶೀಲ ಚಿಂತನೆ, ದೂರದೃಷ್ಟಿ ಮತ್ತು ಸರ್ವಧರ್ಮ ಸಮಾನದೃಷ್ಟಿ ಹೀಗಾಗಿಯೇ ಅಂಬೇಡ್ಕರ್ ಎಲ್ಲಾ ಭಾರತೀಯರು ಗೌರವಿಸುವಂತಹ ವ್ಯಕ್ತಿ” ಎಂದರು.
ಕೃಷಿ ವಿಶ್ವವಿದ್ಯಾಲಯದ ಸಹ ಸಂಶೋಧನಾ ನಿರ್ದೇಶಕ ಡಾ. ಎಸ್ ಬಿ ಜಗ್ಗಿನವರ ಮಾತನಾಡಿ, “ಅಂಬೇಡ್ಕರ್ ಅವರು, ಹಿಂದುಳಿದ ವರ್ಗಗಳು, ದೀನದಲಿತರಗೆ ವಿಶೇಷ ಸವಲತ್ತುಗಳನ್ನು ನೀಡುವ ಶೈಕ್ಷಣಿಕ ಕ್ರಾಂತಿಯ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಅಡಿಪಾಯ ಹಾಕಿದವರು. ಸಮಾನ ನಾಗರಿಕ ಹಕ್ಕುಗಳು ಮತ್ತು ಕಾನೂನಾತ್ಮಕ ಹೋರಾಟ ಮಾಡಲು ಎಲ್ಲಾ ದುರ್ಬಲ ವರ್ಗದವರಿಗೆ ಅವಕಾಶ ಕಲ್ಪಿಸಿದ್ದಾರೆ” ಎಂದರು.
ಇದೇ ವೇಳೆ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ರಿಹಾನ ಮಲಿಕ್ ಹಳ್ಳೂರ, ಮಲ್ಲಿಕಾರ್ಜುನ ಕಾಮರೆಡ್ಡಿ ಹಾಗೂ ಅನಿತಾ ಜಾರ್ಜ್ ಅವರನ್ನು ಅಭಿನಂದಿಸಲಾಯಿತು.
ಇದನ್ನೂ ಓದಿ: ವಿಜಯಪುರ | ಹರೀಶ್ ಡಿ.ಕೆ. ಅವರಿಗೆ ಪಿಎಚ್.ಡಿ ಪದವಿ
ಕಾರ್ಯಕ್ರಮದಲ್ಲಿ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ, ಡಾ. ಅಶೋಕ ಸಜ್ಜನ, ಡಾ. ಆರ್ ಬಿ ಜೊಳ್ಳಿ, ಡಾ ಎಸ್ ಎಂ ವಸ್ತ್ರದ, ಡಾ. ಎಂ ವೈ ತೆಗ್ಗಿ, ಡಾ. ಎಸ್ ಜಿ ಅಸ್ತಿ, ಡಾ. ರಮೇಶ ಬೀರಗೆ, ಡಾ. ಚಂದ್ರಕಾಂತ ಸೋರೆಗಾಂವಿ, ಡಾ. ಉಮರ್ ಪಾರುಕ್ ಮೋಮಿನ, ಡಾ. ಎಸ್ ಎಸ್ ಕರಭಂಟನಾಳ, ಡಾ. ಬಸಮ್ಮ ಕುಂಬಾರ, ತುಕಾರಾಮ ಚಲವಾದಿ, ಮಹಾಂತೇಶ ಗೌಡರ ಸೇರಿದಂತೆ ಇತರರು ಇದ್ದರು.