ಮೈಸೂರು ರೈಲ್ವೆ ವಸ್ತು ಸಂಗ್ರಹಾಲಯ ನೈಋತ್ಯ ರೈಲ್ವೆ (ಎಸ್‌ಡಬ್ಲ್ಯೂಆರ್), ಮೈಸೂರು ವಿಭಾಗದಲ್ಲಿಂದು ‘ ವಿಶ್ವ ಪರಂಪರೆ ದಿನ 2025 ‘ ನ್ನು ವಿಶೇಷವಾಗಿ ಮಕ್ಕಳೊಂದಿಗೆ ಆಚರಿಸಿದರು.
ವಿಪತ್ತು, ಸಂಘರ್ಷ ನಿರೋಧಕ, ಪರಂಪರೆ ಸಂರಕ್ಷಣೆಗೆ ಸಂಬಂಧಿಸಿದ ಕ್ರಿಯೆಗಳು. ಕೇಂದ್ರೀಕರಿಸಿದ ಪೋಸ್ಟರ್ ತಯಾರಿಕೆ, ಚಿತ್ರಕಲೆ ಮತ್ತು ವರ್ಣಚಿತ್ರ ಸ್ಪರ್ಧೆಯನ್ನು ಏರ್ಪಡಿಸಿದ್ದರು.
ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್, ಮಾತನಾಡಿ ” ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಯುವ ಜನರ ಪಾತ್ರ ಪ್ರಮುಖವಾದದ್ದು. ಯಾವುದೇ ಸಂದರ್ಭವಾಗಲಿ ಭವಿಷ್ಯದ ಪೀಳಿಗೆಗೆ ಉಳಿಯುವಂತೆ ಹಿಂದಿನ ಅನುಭವ, ಅಂದಿನ ಪರಿಚಯ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಬೇಕು,ಯುವ ಪೀಳಿಗೆಗೆ ಉಳಿಯುವಂತೆ ಮಾಡಬೇಕು. ಮೈಸೂರು ರೈಲ್ವೆ ವಸ್ತು ಸಂಗ್ರಹಾಲಯ ಅಂತಹ ಕೆಲಸದಲ್ಲಿ ನಿರತವಾಗಿದೆ. ವಿದ್ಯಾರ್ಥಿಗಳಿಗೆ ಉಪಯುಕ್ತವಾದದ್ದು ” ಎಂದರು.

ರೈಲಿನ ಬೆಳವಣಿಗೆಯ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಚಿತ್ರಕಲೆ ಪ್ರದರ್ಶನ, ಫೋಟೋಗಳು, ರಾಜ ವಂಶಸ್ಥರು ಬಳಸುತಿದ್ದ ರೈಲ್ವೆ ಎಂಜಿನ್, ಹಳೆಯ ಬೋಗಿಗಳು, ಅಂದಿನ ವಿವಿಧ ಮಾದರಿಯ ಸಿಗ್ನಲ್ ಗಳು, ಹಳೆಯ ರೈಲ್ವೆ ಇಂಜಿನ್ ಗಳು ಸೇರಿದಂತೆ ಇನ್ನಿತರೇ ಸಾಮಾಗ್ರಿಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಅಂಧ ಯುವತಿ ನೆರವಿಗೆ ಧಾವಿಸಿದ ಜಿಲ್ಲಾಧಿಕಾರಿ
ಮೈಸೂರು ರೈಲ್ವೆ ವಸ್ತು ಸಂಗ್ರಹಾಲಯದಲ್ಲಿ ಇಂದು ಸಂದರ್ಶಕರಿಗೆ ಪ್ರವೇಶವನ್ನು ಉಚಿತವಾಗಿದ್ದು, ನಾಳೆಯೂ ಸಹ ಉಚಿತವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುತ್ತಾರೆ.