ಸರಕಾರಿ ಹುದ್ದೆಗಾಗಿ ಸತತ ಪ್ರಯತ್ನದಲ್ಲಿರುವ ಹಿನ್ನಲೆಯಲ್ಲಿ ಇಂಜಿನಿಯರ ನೇಮಕಾತಿಯ ಅಂತಿಮ ಪಟ್ಟಿಯಲ್ಲಿ ಹೆಸರು ಬಂದ ಕಾರಣಕ್ಕೆ ಸಿಂಧನೂರು ನಗರಸಭಾಧ್ಯಕ್ಷೆ ಸ್ಥಾನಕ್ಕೆ ಪ್ರಿಯಾಂಕ ರಾಜೀನಾಮೆ ಸಲ್ಲಿಸಿದ್ದಾರೆ.
ನಗರಸಭೆ ಅಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ಮೀಸಲಾಗಿದ್ದರಿಂದ ಏಕಮಾತ್ರ ಸದಸ್ಯೆಯಾಗಿರುವ ಪ್ರಿಯಾಂಕ ರೋಹಿತ್ ಅವರು ಫೆ. 13ರಂದು ನಗರಸಭೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರೂ, ಕಾಂಗ್ರೆಸ್ ಬೆಂಬಲದೊಂದಿಗೆ ಅಧ್ಯಕ್ಷ ಗಾದಿ ಅಲಂಕರಿಸಿದ್ದರು.ಆದರೆ ಇದೀಗ ಸರ್ಕಾರಿ ಹುದ್ದೆ ಅವರಿಗೆ ಒಲಿದು ಬಂದ ಹಿನ್ನಲೆಯಲ್ಲಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಜಿಲ್ಲಾಧಿಕಾರಿಗಳಿಗೆ ಪತ್ರ ರವಾನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮಂತ್ರಾಲಯ ಪ್ರವಾಸಕ್ಕೆಂದು ತೆರಳಿದ್ದ ಯುವಕರಿಬ್ಬರು ನೀರುಪಾಲು
ಪ್ರಿಯಾಂಕ ಅವರು 2017ರಲ್ಲಿ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿ, ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದರು. ಇದೀಗ ಆ ಹುದ್ದೆಯ ನೇಮಕಾತಿಯ ಆದೇಶದಲ್ಲಿ ಅವರ ಹೆಸರು ಬಂದಿದ್ದು, ಆ ಹಿನ್ನಲೆಯಲ್ಲಿ ಸರ್ಕಾರಿ ಹುದ್ದೆಗಾಗಿ ನಗರಸಭೆ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ವಿಶೇಷವಾಗಿದೆ.
ನಗರಸಭೆ ಆಡಳಿತ ಮಂಡಳಿ ಮುನ್ನಡೆಸಲು ಉಪಾಧ್ಯಕ್ಷೆಯಾಗಿರುವ ಮಂಜುಳಾ ಪ್ರಭುರಾಜ್ ಅವರಿಗೆ ಹಂಗಾಮಿ ಅಧ್ಯಕ್ಷ ಸ್ಥಾನ ಸಿಗಬಹುದು ಎಂದು ಕೇಳಿ ಬರುತ್ತಿದೆ.ಆಡಳಿತ ಮಂಡಳಿಯ ಅಧಿಕಾರವಧಿ 6 ತಿಂಗಳು ಬಾಕಿ ಉಳಿದಿದೆ.
