ಧಾರವಾಡ | ಏ.19ಕ್ಕೆ “ವಚನ ದರ್ಶನ” ಮಿಥ್ಯ/ಸತ್ಯ ಗ್ರಂಥ ಲೋಕಾರ್ಪಣೆ

Date:

Advertisements

“ವಚನ ದರ್ಶನ” ಮಿಥ್ಯ/ಸತ್ಯ ಗ್ರಂಥ ಲೋಕಾರ್ಪಣೆ ಸಮಾರಂಭ ಏ.19ರ ಬೆಳಿಗ್ಗೆ 10:30ಕ್ಕೆ ಧಾರವಾಡ ಚನ್ನಬಸವೇಶ್ವರ ನಗರದ ಲಿಂಗಾಯತ ಭವನದಲ್ಲಿ ಏರ್ಪಡಿಸಿದ್ದು, ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಲಿಂಗಾಯತ ಧರ್ಮ ಮಹಾಸಭಾ, ರಾಷ್ಟ್ರೀಯ ಬಸವದಳ, ಬಸವ ಸಮಿತಿ, ಬಸವ ಕೇಂದ್ರ, ಕರ್ನಾಟಕ ಲಿಂಗಾಯತ ಒಳಪಂಗಡಗಳ ವಿಕತಾ ಸಮಿತಿ ಹಾಗೂ ಬಸವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.

ಈ ಕುರಿತು ಸುದ್ಧಿಗೋಷ್ಠಿಯಲ್ಲಿ‌ ರಾಜ್ಯ ಉಪಾಧ್ಯಕ್ಷ ಎಂ ವಿ ಗೊಂಗಡಶೆಟ್ಟಿ ಮಾತನಾಡಿ, ಕರ್ನಾಟಕ ಸರ್ಕಾರ ಬಸವ ಧರ್ಮೀಯರ ಪರವಾಗಿ ಪರಿಗಣಿಸಲು, ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ಶರಣರ ಸ್ಥಾನಗಳನ್ನು ಅಭಿವೃದ್ಧಿಪಡಿಸುವುದರೊಂದಿಗೆ ವಿಶ್ವಗುರು ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಹೆಮ್ಮೆಯ ವಿಷಯ. ಪ್ರತಿಯೊಬ್ಬ ಲಿಂಗಾಯತರು ಪ್ರಜ್ಞಾವಂತರಾಗುತ್ತಾ ಸಂಸ್ಕೃತ ಶ್ಲೋಕಗಳನ್ನು ಕೈಬಿಟ್ಟು ವಚನಗಳಿಂದ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇದರೊಂದಿಗೆ ಅನೇಕ ಸಂಘ-ಸಂಸ್ಥೆಗಳು ಲಿಂಗಾಯತರೊಂದಿಗೆ ಕೈಜೋಡಿಸುತ್ತಿರುವುದು ಶ್ಲಾಘನೀಯ ಎಂದರು.

ಇತ್ತೀಚೆಗೆ ವಚನದರ್ಶನ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕದ ಮುಖಪುಟದಲ್ಲಿ ಬಸವಣ್ಣನವರನ್ನು ಒಬ್ಬ ಋಷಿಯಂತೆ ತೋರಿಸಿ ಹಿಂದೆ ಚಕ್ರವನ್ನು ಮೂಡಿಸಿ ಬಿಲ್ಲು ಬಾಣಗಳನ್ನು ಮುದ್ರಿಸಿದ್ದಾರೆ. ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಹಿಂದೂ ಪ್ರತಿಪಾದಕ ಧುರೀಣರು ಭಾಗವಹಿಸಿ ಬಸವ ಧರ್ಮಕ್ಕೆ ಅಪಚಾರ ಎಸೆಗಿದ್ದಾರೆ. ಇದಕ್ಕೆ ಪ್ರತಿಯಾಗಿ “ವಚನ ದರ್ಶನ ಮಿಥ್ಯ V/S ಸತ್ಯ” ಎಂಬ ಪುಸ್ತಕ ಬಿಡುಗಡೆ ಮಾಡಿ ನಿಜ ಲಿಂಗಾಯತರ ತತ್ವಗಳನ್ನು ತಿಳಿಸುವ ಪ್ರಯತ್ನವಿದು ಮಾಡುತ್ತಿದ್ದೇವೆ ಎಂದರು.

Advertisements
IMG 20250418 225542

ಅಂದು ಬೆಳಗ್ಗೆ ಷಟಸ್ಥಲ ಧ್ವಜಾರೋಣ ನೆರವೇರಲಿದ್ದು ಮೂರುಸಾವಿರ ಸಂಸ್ಥಾನ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಜಿ, ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮಿಜಿ, ಮುರಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮಿಜಿ, ಅಕ್ಕಮಹಾದೇವಿ ಪೀಠದ ಜ್ಞಾನೇಶ್ವರಿ ಮಾತಾಜಿ ಸಾನಿಧ್ಯವಹಿಸುವರು. ಜಾಗತಿಕ ಅಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು, ಸಭಾಪತಿ ಬಸವರಾಜ ಹೊರಟ್ಟಿ ಸಮಾರಂಭ ಉದ್ಘಾಟಿಸುವರು. ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ಗ್ರಂಥ ಬಿಡುಗಡೆ ಹಾಗೂ ಆಶಯ ನುಡಿಗಳನ್ನಾಡುವರು. ಸಂಶೋಧಕ ಡಾ. ವೀರಣ್ಣ ರಾಜೂರ ಗ್ರಂಥ ಪರಿಚಯ ಮಾಡಲಿದ್ದು ಮಹಾಂತೇಶ ಪಾಟೀಲ ಸಹಯೋಗ ನುಡಿ ಸಲ್ಲಿಸುವರು. ಅಖಿಲ ಕರ್ನಾಟಕ ಅಂಗಾಯತ ಒಳ ಪಂಗಡಗಳ ವಿಕತಾ ಸಮಿತಿ ರಾಜ್ಯಾಧ್ಯಕ್ಷ ಜಿ.ವಿ. ಕೊಂಗವಾಡ, ಸಾಹಿತಿ ಡಾ. ಎನ್.ಜಿ. ಮಹಾದೇವಪ್ಪ, ಡಾ. ಸಿ.ಎಂ. ಕುಂದಗೋಳ, ಡಿ.ಸಿ.ಪಿ. ಪೊಲೀಸ್ ಕಮೀಶನರೇಟ್ ರವೀಶ ಸಿ.ಆರ್. ಅತಿಥಿಯಾಗಿ ಪಾಲ್ಗೊಳ್ಳುವರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಧಾರವಾಡ ಜಿಲ್ಲಾ ಘಟಕ ಅಧ್ಯಕ್ಷ ಪ್ರದೀಪಗೌಡ ಪಾಟೀಲ, ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಂಗಮೇಶ ಲೋಕಾಪುರ, ಗುರುಬಸವ ಮಂಟಪ ಸಂಯೋಜಕ ಶಶಿಧರ ಕರವೀರಶೆಟ್ಟರ, ಪ್ರಬಣ್ಣ ನಡಕಟ್ಟಿ, ಜಿ.ಬಿ.ಹಳ್ಯಾಳ, ಶಾರದಾ ಕೌದಿ, ಸವಿತಾ ನಡಕಟ್ಟಿ, ಚನ್ನಪ್ಪಗೌಡ ಪಾಟೀಲ ಉಪಸ್ಥಿತರಿರುವರು.

ಪತ್ರಿಕಾಗೋಷ್ಠಿಯಲ್ಲಿ ಪ್ರಭು ನಡಕಟ್ಟಿ, ಜಿ ವಿ ಕೊಂಗವಾಡ. ಪ್ರದೀಪ್ ಪಾಟೀಲ್. ಸಿದ್ದರಾಮ ನಡಕಟ್ಟಿ. ಎಂ ವಿ ಮುಳಕುರ್ ಉಮೇಶ್ ಕಟಗಿ ಬಸವಂತ ತೋಟದ್ ಮಲ್ಲಿಕಾರ್ಜುನ ಚೌದರಿ. ಶೇಖರ್ ಕುಂದಗೋಳ್ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X