ರಾಜ್ಯದ ಹಲವು ಜಿಲ್ಲೆಗಳಲ್ಲಿಶುಕ್ರವಾರ ರಾತ್ರಿ ಭಾರೀ ಮಳೆಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ರಾಯಚೂರಿನಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ.
ಉತ್ತರ ಒಳನಾಡು ಪ್ರದೇಶದಲ್ಲಿ ಬಿರುಗಾಳಿ, ಮಳೆ, ಗುಡುಗು, ಸಿಡಿಲು ಅಬ್ಬರಿಸಿದೆ. ಗಂಟೆಗೆ 50-70 ಕಿ.ಮೀ ವೇಗದಲ್ಲಿ ಗಾಳಿ ಬೀಸಿದೆ. ದಕ್ಷಿಣ ಒಳನಾಡು ಪ್ರದೇಶದಲ್ಲಿಯೂ ಜೋರು ಗಾಳಿ ಬೀಸಿದ್ದು, ಹಲವೆಡೆ ಭಾರೀ ಮಳೆ ಸುರಿದಿದೆ.
ರಾಯಚೂರು ನಗರದಲ್ಲಿ ಈ ವರ್ಷದ ಮೊದಲ ಮಳೆ ಶುಕ್ರವಾರ ಸುರಿದಿದೆ. ರಾಯಚೂರು ತಾಲೂಕು, ಮಸ್ಕಿ, ಹಟ್ಟಿ ಚಿನ್ನದ ಗಣಿ, ಲಿಂಗಸುಗೂರು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ.
ರಾಯಚೂರು ತಾಲೂಕಿನ ಉಡಮಗಲ್ ಮತ್ತು ಮರ್ಚಾಟ್ಹಾಳ ಗ್ರಾಮಗಳಲ್ಲಿ ಸಿಡಿಲು ಬಡಿದು ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಉಡಮಗಲ್ ಗ್ರಾಮದ ಮಲ್ಲಮ್ಮ ಮತ್ತು ಮರ್ಚಾಟ್ಹಾಳದ ಹನುಮಂತ ಎಂದು ಗುರುತಿಸಲಾಗಿದೆ.