“ಕುವೆಂಪು ಅವರ ಸಾಹಿತ್ಯವನ್ನು ಕುರಿತು ಕೀರ್ತಿನಾಥ ಕುರ್ತಕೋಟಿ ಅವರು ವಿಮರ್ಶ ಲೇಖನಗಳನ್ನು ಬರೆದಿದ್ದಾರೆ. ಜೊತೆಗೆ ಬೇಂದ್ರೆ ಅವರ ಆಳವಾದ ಸಾಹಿತ್ಯವನ್ನೂ ಅಧ್ಯಯನ ಮಾಡಿದ್ದರು. ಶಂಕರ ಮೋಕಾಶಿ ಪುಣೆಕರ, ಗಿರೀಶ್ ಕಾರ್ನಾಡ ಇನ್ನೂ ಸಮಕಾಲೀನರು ಸೇರಿ ಚರ್ಚೆ ಮಾಡುತ್ತಿದ್ದರು. ಕುರ್ತಕೋಟಿ ಅವರ ವಿಮರ್ಶ ಕೃತಿಗಳನ್ನು ಮನೋಹರ ಗ್ರಂಥಾಮಾಲ ಪ್ರಕಾಶನದಿಂದ ಪ್ರಕಟಿಸಿದೆ” ಎಂದು ವಿಚಾರ ಗೋಷ್ಠಿಯಲ್ಲಿ ಉಪನ್ಯಾಸಕರು ದತ್ತಪ್ರಸನ್ನ ಪಾಟೀಲ ಹೇಳಿದರು.
ಗದಗ ಜಿಲ್ಲೆಯ ಗದಗ ತಾಲ್ಲೂಕು ಕುರ್ತಕೋಟಿ ಗ್ರಾಮದಲ್ಲಿ 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
“ಬೇಂದ್ರೆ ಅವರ ಕವನ ಸಂಕಲನಗಳು ಒಂದು ವೇಳೆ ಕಳೆದುಹೋದರೆ ಮತ್ತೆ ಕೀರ್ತಿನಾಥ ಕುರ್ತಕೋಟಿ ಅವರ ನಾಲಿಗೆಯಿಂದ ಮತ್ತೆ ಮರು ಸೃಷ್ಟಿಸಬಹುದು. ಅಷ್ಟು ಕುರ್ತಕೋಟಿಯವರು ನೆನಪಿನ ಶಕ್ತಿ ಹೊಂದಿದ್ದರು” ಎಂದು ಹೇಳಿದರು.
“ಸೃಜನಶೀಲ ವಿಮರ್ಶಕರು ಹೇಗಿರುತ್ತರೆಂದರೆ ಸೃಜನಶೀಲ ಕವಿ ಬರೆದ ಕವಿತೆ ಅರ್ಥವನ್ನು ಗ್ರಹಿಸುವಂತೆ ಕೀರ್ತಿನಾಥ ಕುರ್ತಕೋಟಿ ಅವರು ಇದ್ದರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಒಟ್ಟು 49 ಕೃತಿಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ” ಎಂದು ಹೇಳಿದರು.
ಆಧುನಿಕ ಕನ್ನಡ ಸಾಹಿತ್ಯಕ್ಕೆ ಗದಗ ತಾಲೂಕಿನ ಕೊಡುಗೆ ವಿಷಯದ ಕುರಿತು ಡಾ. ಶರಣಬಸವ ವೆಂಕಟಾಪುರ ಅವರು ಉಪನ್ಯಾಸ ನೀಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ಇಂಗ್ಲಿಷ್ ಪರಿಪೂರ್ಣ ಭಾಷೆ ಅಲ್ಲ, ಕನ್ನಡ ಪರಿಪೂರ್ಣ ಭಾಷೆಯಾಗಿದೆ: ಕಸಾಪ ಅಧ್ಯಕ್ಷ ಮಹೇಶ ಜೋಶಿ
ವಿಚಾರ ಗೋಷ್ಠಿಯ ದ ಸಾ ಪ ರಾಜ್ಯಾಧ್ಯಕ್ಷರು ಡಾ. ಅರ್ಜುನ ಗೋಳಸಂಗಿ ಅಧ್ಯಕ್ಷತೆ ಮಾತುಗಳನ್ನಾಡಿದರು. ಉಪನ್ಯಾಸಕರು ಡಾ. ವಾಯ್. ಆರ್. ಬೇಲೆರಿ ಅವರು ಆಶಯ ನುಡಿಗಳನ್ನಾಡಿದರು. ಎಸ್ ಪಿ ಪ್ರಭಯನಮಠ, ಡಿ. ಕೆ. ಹಂಚಿನಾಳ, ಸಿದ್ದಲಿಂಗೇಶ ಸಜ್ಜನಶೆಟ್ಟರ, ಸಂಗಪ್ಪ ಬ್ಯಾಹಟ್ಟಿ, ಶಕುಂತಲಾ ಸಿಂಧೂರ, ಚನ್ನವೀರ ಶಾಸ್ತ್ರಿಗಳು ಕಡಣಿ, ರಾಜಶೇಖರ್ ದಾನರೆಡ್ಡಿ, ಬಸವರಾಜ ಗಣಪ್ಪನವರ, ಗಂಗೂಬಾಯಿ ಪವಾರ ಹಾಗೂ ಎನ್. ವಾಯ್. ಕಾಳಿ ಅವರು ಗೌರವ ಉಪಸ್ಥಿತರಿದ್ದರು
