ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ ತನ್ನ ವಿದ್ಯಾರ್ಥಿಗಳಿಗೆ ಮದ್ಯ ಕುಡಿಸಿರುವ ಘಟನೆ ಮಧ್ಯಪ್ರದೇಶದ ಕತ್ನಿ ಜಿಲ್ಲೆಯಲ್ಲಿ ನಡೆದಿದೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.
ಆರೋಪಿ ಶಿಕ್ಷಕನನ್ನು ಲಾಲ್ ನವೀನ್ ಪ್ರತಾಪ್ ಸಿಂಗ್ ಎಂದು ಹೆಸರಿಸಲಾಗಿದೆ. ಆರೋಪಿಯು ಕತ್ನಿ ಜಿಲ್ಲೆಯ ಖಿರ್ಹಾನಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಶಿಕ್ಷಕ ತನ್ನ ವಿದ್ಯಾರ್ಥಿಗಳಿಗೆ ಮದ್ಯ ನೀಡುತ್ತಿದ್ದ ವಿಡಿಯೋ ಶುಕ್ರವಾರ ಬೆಳಕಿಗೆ ಬಂದಿತ್ತು.
ವಿಡಿಯೊದಲ್ಲಿ, ಕೊಠಡಿಯೊಂದರಲ್ಲಿ ಕುಳಿತಿರುವ ಶಿಕ್ಷಕ ಸಣ್ಣ ಮಕ್ಕಳಿಗೆ ಲೋಟಗಳಲ್ಲಿ ಮದ್ಯವನ್ನು ನೀಡಿದ್ದಾರೆ. ಅದನ್ನು ಕುಡಿಯುವುದಕ್ಕೂ ಮುನ್ನ ನೀರು ಬೆರೆಸಿಕೊಳ್ಳುವಂತೆ ಸೂಚಿಸುತ್ತಿರುವುದು ಕಂಡುಬಂದಿದೆ.
मध्य प्रदेश : कटनी में शिक्षक ने बच्चों को पिलाई शराब
— News24 (@news24tvchannel) April 19, 2025
◆ आरोपी शिक्षक का नाम लाल नवीन प्रताप सिंह है
◆ जिला शिक्षा अधिकारी ने शिक्षक के निलंबन के आदेश जारी कर दिए हैं#Katni | Madhya Pradesh | Katni Teacher | Teacher | #Teacher pic.twitter.com/s4AksHqWAR
ವಿಡಿಯೋವನ್ನು ಗಮನಿಸಿ, ಇದು ಗಂಭೀರ ಕೃತ್ಯವೆಂದು ಪರಿಗಣಿಸಿದ ಕತ್ನಿ ಜಿಲ್ಲಾಧಿಕಾರಿ ದಿಲೀಪ್ ಕುಮಾರ್ ಯಾದವ್ ಅವರು ಆರೋಪಿ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಶಿಕ್ಷಣಾಧಿಕಾರಿ ಒ.ಪಿ ಸಿಂಗ್ ಅವರಿಗೆ ನಿರ್ದೇಶನ ನೀಡಿದ್ದರು. ಅವರ ನಿರ್ದೇಶನದಂತೆ ಆರೋಪಿ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.