ನಿನ್ನೆ ಸುರಿದ ಧಾರಾಕಾರ ಮಳೆಗೆ ಸಿಡಿಲಿನ ಬಡಿತಕ್ಕೆ ಸಾವನ್ನಪ್ಪಿದ್ದ ರಾಯಚೂರು ತಾಲೂಕಿನ ಉಡಮಗಲ್ ಗ್ರಾಮದ ಮಲ್ಲಮ್ಮ ಹಾಗೂ ಮರ್ಚಟಾಳ ಗ್ರಾಮದ ಸಣ್ಣ ಹನುಮಂತು ಅವರ ಮನೆಗೆ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ತಲಾ 5 ಲಕ್ಷ ರೂ.ಗಳ ಪರಿಹಾರ ಚೆಕ್ ವಿತರಿಸಿದರು.
ರಾಯಚೂರು ತಾಲ್ಲೂಕಿನ ಉಡಮಗಲ್ ಗ್ರಾಮದ ಮಲ್ಲಮ್ಮ(೪೫) ಜಮೀನಿಗೆ ಕೆಲಸಕ್ಕೆಂದು ಹೋಗಿ ಬರುವಾಗ ಸಿಡಿಲು ಬಡಿದು ಮೃತಪಟ್ಟಿದ್ದಳು ಹಾಗೂ ಇನ್ನೊಬ್ಬ ಮರ್ಚಟ್ಹಾಳ ಗ್ರಾಮದ ಸಣ್ಣ ಹನುಮಂತ(50) ಸಿಡಿಲು ಬಡಿದು ಸಾವನ್ನಪ್ಪಿದ್ದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಿಡಿಲು ಬಡಿದು ಎರಡು ಹಸು, ಎಮ್ಮೆ ಸಾವು
ಶನಿವಾರ ಬೆಳಿಗ್ಗೆ ಶಾಸಕ ಬಸನಗೌಡ ದದ್ದಲ್ ಮೃತರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಗ್ರಾಮದ ಮುಖಂಡರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
