ಮುಂಬೈ ಬಿಎಂಸಿಯಿಂದ 90 ವರ್ಷದ ಜೈನ ದೇಗುಲ ಧ್ವಂಸ: ಬಿಜೆಪಿ ವಿರುದ್ಧ ಬೃಹತ್ ಪ್ರತಿಭಟನಾ ರ್‍ಯಾಲಿ

Date:

Advertisements

ಮುಂಬೈನ ವಿಲೇ ಪಾರ್ಲೆಯಲ್ಲಿರುವ 90 ವರ್ಷ ಹಳೆಯ ಪಾರ್ಶ್ವನಾಥ ದಿಗಂಬರ ಜೈನ ದೇವಾಲಯವನ್ನು ಬಿಎಂಸಿ (ಬೃಹನ್‌ ಮುಂಬೈ ಕಾರ್ಪೊರೇಷನ್) ಬುಧವಾರ ಕೆಡವಿದ್ದರ ವಿರುದ್ಧ ಜೈನ ಸಮುದಾಯದ ಸಾವಿರಾರು ಮಂದಿ ಇಂದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ದೇವಾಲಯದ ಧ್ವಂಸವನ್ನು ವಿರೋಧಿಸಿ ಶನಿವಾರ ಬೆಳಗ್ಗೆ ಸಮುದಾಯದ ಮುಖಂಡರು ಅಹಿಂಸಾತ್ಮಕ ಬೃಹತ್ ರ್‍ಯಾಲಿಯನ್ನು ನಡೆಸಿದರು. ಸಚಿವ ಮಂಗಲ್‌ಪ್ರಭಾತ್ ಲೋಧಾ, ಶಾಸಕ ಪರಾಗ್ ಅಲ್ವಾನಿ, ಸಂಸದ ವರ್ಷ ಗಾಯಗ್ವಾಡ್ ಮತ್ತು ಜೈನ ಸಮುದಾಯದ ಸಂತರು ಈ ರ್‍ಯಾಲಿಯಲ್ಲಿ ಭಾಗವಹಿಸಿದ್ದರು.

ಎಲ್ಲ ಪಕ್ಷಗಳ ನಾಯಕರು ರ್‍ಯಾಲಿಯಲ್ಲಿ ಪಾಲ್ಗೊಂಡು ಬಿಎಂಸಿಯ ಈ ಕ್ರಮವನ್ನು, ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವನ್ನು ಖಂಡಿಸಿದರು. ಈ ನಾಯಕರೆಲ್ಲರೂ ಸಭೆ ನಡೆಸಿ ಭವಿಷ್ಯದ ಕಾನೂನು ಹೋರಾಟ ಸೇರಿದಂತೆ ಮುಂತಾದ ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು. ಬಿಎಂಸಿಯ ಈ ಕ್ರಮದಿಂದ ಜೈನ ಸಮುದಾಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Advertisements

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತೀಯ ಸಮಾಜದಲ್ಲಿ ಬ್ರಾಹ್ಮಣ್ಯ-ಮನುವಾದ ಮರುಕಳಿಸುತ್ತಿದೆಯೇ?

ಮುಂಬೈನ ಕಾಂಬ್ಲಿವಾಡಿಯ ನೇಮಿನಾಥ್ ಸಹಕಾರಿ ವಸತಿ ಸೊಸೈಟಿಯ ಒಳಗಿರುವ ದೇವಾಲಯದ (ಚೈತಾಲಯ) ಟ್ರಸ್ಟಿ ಅನಿಲ್ ಶಾ ಮಾತನಾಡಿ, ಏಪ್ರಿಲ್ 16 ರಂದು 90 ವರ್ಷ ಹಳೆಯ ಪಾರ್ಶ್ವನಾಥ ದಿಗಂಬರ ಜೈನ ದೇವಾಲಯವನ್ನು ಯಾವುದೇ ಕಾರಣವಿಲ್ಲದೆ ಕೆಡವಲಾಗಿದೆ. ಈ ದೇಗುಲವನ್ನು 1960ರ ದಶಕದ ಹಿಂದೆಯೇ ನಿರ್ಮಿಸಲಾಗಿದ್ದು, ಬಿಎಂಸಿಯ ಅನುಮತಿಯೊಂದಿಗೆ ನವೀಕರಿಸಲಾಗಿತ್ತು. ದೇಗುಲವನ್ನು ನವೀಕರಿಸಲಾಗಿರುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿತ್ತು. ಆದರೆ ಬಿಎಂಸಿ ಯಾವುದೇ ಕಾರಣ ನೀಡದೆ ದೇಗುಲವನ್ನು ನಾಶಗೊಳಿಸಿದೆ. ಇದರ ವ್ಯಾಜ್ಯ ಕೋರ್ಟ್‌ನಲ್ಲಿರುವಾಗಲೇ ಧ್ವಂಸಗೊಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ದೇವಾಲಯದ ಧ್ವಂಸಕ್ಕೆ ಸಂಬಂಧಿಸಿದಂತೆ ಬಿಎಂಸಿ ನಿರ್ವಹಣಾ ಸಮಿತಿಗೆ ನೋಟಿಸ್ ನೀಡಿತ್ತು. ಇದರ ವಿರುದ್ಧ ಜೈನ ಸಮುದಾಯ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ಗುರುವಾರ ನಡೆಯಬೇಕಿತ್ತು, ಆದರೆ ಅದಕ್ಕೂ ಮೊದಲು ಬುಧವಾರ ಬಿಎಂಸಿ ತಂಡ ದೇವಾಲಯವನ್ನು ಕೆಡವಿದೆ.

THIS IS MASSIVE 🚨⚡

Huge protest by Jain community against BJP Govt in Mumbai over the demolition of a sacred temple

Where are Godi Media & IT cell trolls who cheer bulldozer mafia? pic.twitter.com/1eKJxbIvhP
— Ankit Mayank (@mr_mayank) April 19, 2025

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X