ನಿತೀಶ್ ಕುಮಾರ್ ನೇತೃತ್ವದ ಬಿಹಾರ ಎನ್‌ಡಿಎ ಸರ್ಕಾರವು ರಾಜಕೀಯ ಪ್ರಚಾರಕ್ಕಾಗಿ 225 ಕೋಟಿ ರೂ. ದುರುಪಯೋಗಪಡಿಸಿದೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಶನಿವಾರ ಆರೋಪಿಸಿದ್ದಾರೆ.
ತುರ್ತು ಪತ್ರಿಕಾಗೋಷ್ಠಿ ಕರೆದ ತೇಜಸ್ವಿ ಯಾದವ್ ಅವರು, “ಬಿಹಾರದ ಸ್ಥಳೀಯ ಗುತ್ತಿಗೆದಾರರನ್ನು ಸರ್ಕಾರ ಕಡೆಗಣಿಸುತ್ತಿದೆ. ಬಿಹಾರದ ಹೊರಗಿನ ಸಂಸ್ಥೆಗಳು ಮತ್ತು ಖಾಸಗಿ ಕಂಪನಿಗಳಿಗೆ ಗುತ್ತಿಗೆಯನ್ನು ನೀಡಲಾಗುತ್ತಿದೆ. ಗುತ್ತಿಗೆಗಳನ್ನು ನೀಡುವುದಕ್ಕಾಗಿ ಸಂಪುಟ ಸಚಿವರು ಗುತ್ತಿಗೆದಾರರಿಂದ ಹಣವನ್ನು ಪಡೆಯುತ್ತಿದ್ದಾರೆ” ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸರಣಿ ಅವಘಡಗಳಿಂದ ಬಯಲಾದ ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’
“ಬಿಹಾರದಲ್ಲಿ ಎನ್‌ಡಿಎ ಆಡಳಿತವು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಯೋಜನೆಗಳ ಅಂದಾಜು ವೆಚ್ಚದಲ್ಲಿ ಸುಮಾರು ಶೇಕಡ 30ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಚುನಾವಣೆಗೆ ಸಂಬಂಧಿಸಿದ ಕೆಲಸಗಳಿಗೆ ಟೆಂಡರ್‌ಗಳನ್ನು ನೀಡಲಾಗುತ್ತಿದೆ. ಚುನಾವಣಾ ಆಯೋಗದಿಂದ ಅನುಮೋದನೆ ಪಡೆದ ನಂತರವೇ ಬಿಲ್‌ಗಳನ್ನು ತೆರವುಗೊಳಿಸಲಾಗುತ್ತಿದೆ” ಎಂದು ಹೇಳಿದರು.
𝐍𝐃𝐀 की बिहार सरकार में संस्थागत भ्रष्टाचार और संगठित लूट के कारण राज्य में वित्तीय अराजकता फैली हुई है। एक भ्रष्टाचारी गिरोह बिहार को संचालित कर रहा है। आज की प्रेस वार्ता की मुख्य बातें और सरकार से सवाल:-
— Tejashwi Yadav (@yadavtejashwi) April 19, 2025
👉 इस सरकार ने आनन-फ़ानन में विगत 𝟕 कैबिनेट बैठकों में 𝟕𝟔 हज़ार… pic.twitter.com/eavpHv6wWN
“2025ರ ವಿಧಾನಸಭೆ ಚುನಾವಣೆಯಲ್ಲಿ ಅವರು (ಎನ್‌ಡಿಎ ಒಕ್ಕೂಟ) ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅವರಿಗೆ ತಿಳಿದಿದೆ. ಹಾಗಾಗಿ, ಅವರು ಭಯಭೀತರಾಗಿದ್ದಾರೆ. ಒಂದಲ್ಲ ಒಂದು ನೆಪ ಹೇಳಿ ಜನರ ಹಣವನ್ನು ಲೂಟಿ ಮಾಡಲು ಯತ್ನಿಸುತ್ತಿದ್ದಾರೆ. ಸರ್ಕಾರ ಯುವಕರಿಗಾಗಿ ಅಧಿಕ ಸಾರ್ವಜನಿಕ ಹಣ ವೆಚ್ಚ ಮಾಡುತ್ತಿದ್ದರೂ ಇಲ್ಲಿನ ಯುವಕರಿಗೆ ಇಲ್ಲಿ ಉದ್ಯೋಗವೇ ಸಿಗುತ್ತಿಲ್ಲ” ಎಂದರು.
“ಸರ್ಕಾರದ ಸಾಲವು 4.06 ಲಕ್ಷ ಕೋಟಿ ರೂ.ಗಳನ್ನು ದಾಟಿದೆ. ಹರ್ ಘರ್ ಕೋ ನಲ್ ಕಾ ಜಲ್ ಯೋಜನೆಗೆ ಸುಮಾರು 25,000ರಿಂದ 30,000 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಆದರೆ ಈ ಯೋಜನೆಯಡಿಯಲ್ಲಿ ನಿಜವಾಗಿ ಏನಾಗುತ್ತಿದೆ ಎಂದು ಎಲ್ಲರಿಗೂ ತಿಳಿದಿದೆ” ಎಂದು ಸರ್ಕಾರವನ್ನು ತೇಜಸ್ವಿ ಟೀಕಿಸಿದರು.
ಇದನ್ನು ಓದಿದ್ದೀರಾ? ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ‘ಬಿಜೆಪಿ ಏಜೆಂಟ್’ : ತೇಜಸ್ವಿ ಯಾದವ್
ಇನ್ನು ತೇಜಸ್ವಿ ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ನಡೆದಿರುವ ಒಟ್ಟು ಆರ್ಥಿಕ ಅಕ್ರಮಗಳಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನೂ ಒದಗಿಸಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಇತ್ತೀಚೆಗೆ ಪ್ರಾರಂಭಿಸಿದ ‘ಮಹಿಳಾ ಸಂವಾದ’ ಹೆಸರಿನಲ್ಲಿ ಎನ್‌ಡಿಎ ಸರ್ಕಾರ 225 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಆರೋಪಿಸಿದರು.
“ಚುನಾವಣಾ ಪ್ರಚಾರಕ್ಕಾಗಿ ಸುಮಾರು 600 ಡಿಜಿಟಲ್ ಪ್ರಚಾರ ವಾಹನಗಳನ್ನು ತರಲಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿಕೂಟವು ಸಾರ್ವಜನಿಕ ಹಣವನ್ನು ಚುನಾವಣಾ ಪ್ರಚಾರಕ್ಕಾಗಿ ಬಳಸುತ್ತಿದೆ” ಎಂದು ದೂರಿದರು.
“ಸರ್ಕಾರವು ಚುನಾವಣಾ ಪ್ರಚಾರಕ್ಕೆ ಹೊಸ ತಂತ್ರವನ್ನು ಬಳಸುತ್ತಿದೆ. ಸಾರ್ವಜನಿಕ ಕ್ಷೇತ್ರಗಳ ವೆಚ್ಚಕ್ಕಾಗಿ ಮೀಸಲಿಟ್ಟ ಹಣವನ್ನೇ ತಮ್ಮ ರಾಜಕೀಯ ಪ್ರಚಾರಕ್ಕಾಗಿ ದುರುಪಯೋಗ ಮಾಡುತ್ತಿದೆ. ಎನ್‌ಡಿಎ ಆಳ್ವಿಕೆಯಲ್ಲಿ ನಿರ್ಮಿಸಲಾದ ಸುಮಾರು 5,000 ಸಣ್ಣ ಸೇತುವೆಗಳು ಮತ್ತು ಕಲ್ವರ್ಟ್‌ಗಳು ಇನ್ನೂ ಬಳಕೆಯಾಗಿದೆ. ಹಾಗೆಯೇ ನಿಷ್ಕ್ರೀಯವಾಗಿ ಉಳಿದಿವೆ” ಎಂದರು.
