ಬೆಂಗಳೂರು ಮೈಸೂರು ಮೂಲಸೌಕರ್ಯ ಕಾರಿಡಾರ್ (ನೈಸ್) ಯೋಜನೆಯ ಅನುಷ್ಠಾನ ಕುರಿತು ಇದುವರೆಗೂ ಆಗಿರುವ ಪ್ರಗತಿಯ ಹಿನ್ನೆಲೆಯಲ್ಲಿ ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪರಾಮರ್ಶಿಸಿ ಸೂಕ್ತ ಶಿಫಾರಸ್ಸುಗಳನ್ನು ಮಾಡಲು ಸಚಿವ ಸಂಪುಟ ಉಪ ಸಮಿತಿಯನ್ನು ಸರ್ಕಾರ ರಚಿಸಿದೆ.
ಗೃಹ ಸಚಿವ ಡಾ. ಜಿ ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಮತ್ತು ಉಪ ಸಮಿತಿಯನ್ನು ರಚಿಸಲಾಗಿದ್ದು, ಆರು ಸಚಿವರ ಸದಸ್ಯರಾಗಿದ್ದಾರೆ. ಈ ಸಚಿವ ಸಂಪುಟ ಉಪಸಮಿತಿಯು ಕಾನೂನು ತಜ್ಞರು ಹಾಗೂ ವಿಷಯದ ಪರಿಣಿತರೊಂದಿಗೆ ಚರ್ಚಿಸಿ ಕಾನೂನಾತ್ಮಕವಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಎರಡು ತಿಂಗಳೊಳಗಾಗಿ ತನ್ನ ವರದಿಯನ್ನು ನೀಡಲು ಸೂಚಿಸಲಾಗಿದೆ.
ಆರು ಸಚಿವರು ಸದಸ್ಯರು
1- ಹೆಚ್ ಕೆ ಪಾಟೀಲ್ - ಕಾನೂನು ಸಚಿವರು
2- ಕೆ ಹೆಚ್ ಮುನಿಯಪ್ಪ – ಆಹಾರ ಖಾತೆ ಸಚಿವರು
3- ಎಂ ಬಿ ಪಾಟೀಲ್ – ಕೈಗಾರಿಕೆ ಸಚಿವರು
4- ಡಾ. ಹೆಚ್ ಸಿ ಮಹದೇವಪ್ಪ – ಸಮಾಜ ಕಲ್ಯಾಣ ಇಲಾಖೆ ಸಚಿವರು
5- ಸತೀಶ್ ಜಾರಕಿಹೊಳಿ – ಲೋಕೋಪಯೋಗಿ ಸಚಿವರು
6- ಕೃಷ್ಣ ಬೈರೇಗೌಡ – ಕಂದಾಯ ಸಚಿವರು