ಧಾರವಾಡ | ಬಲಪಂಥೀಯರ ‘ವಚನ ದರ್ಶನ’ ಕೃತಿ ಜನರ ದಿಕ್ಕು ತಪ್ಪಿಸಿದೆ: ತೋಂಟದ ಸಿದ್ಧರಾಮ ಶ್ರೀ

Date:

Advertisements

ಬಲಪಂಥಿಯರ ವಚನ ದರ್ಶನ ಕೃತಿಯು ಜನರನ್ನು ದಿಕ್ಕು ತಪ್ಪಿಸುವ ಕೆಲಸದ ವಿರುದ್ಧ ವಚನ ದರ್ಶನ ಮಿಥ್ಯ v/s ಸತ್ಯ ಪುಸ್ತಕ ಹೊರಬಂದಿದೆ ಎಂದು ಗದಗ-ಡಂಬಳ ತೋಂಟದ ಸಿದ್ಧರಾಮ ಸ್ವಾಮಿಗಳು ಧಾರವಾಡದಲ್ಲಿ ನಡೆದ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ಬಸವಣ್ಣನವರ ಸಾಮಾಜಿಕ ಹಾಗೂ ಸಮಾನತೆಯನ್ನು ವಿರೋಧಿಸಿದ, ಶರಣರ ಹತ್ಯೆ ಮಾಡಿಸಿದ್ದ ಮನಸ್ಥಿತಿಯವರೇ ವಚನದರ್ಶನ ಪುಸ್ತಕ ಬರೆಯಿಸಿದವರು. ಬಸವಣ್ಣ ಕೇವಲ ಸಮಾಜ ಸುಧಾರಕರು ಮಾತ್ರವಲ್ಲ. ಶರಣರ ವಿಚಾರಗಳನ್ನು ಮೂಲೆ ಗುಂಪಾಗಿಸುವ ಕಾರ್ಯವನ್ನು ವಚನ ದರ್ಶನ ಪುಸ್ತಕದ ಮೂಲಕ ಮಾಡಿದ್ದಾರೆ. ಆದರೆ ಬಸವಣ್ಣ ಕೇವಲ ಭಕ್ತಿ ಚಳುವಳಿಯನ್ನು ಅಷ್ಟೇ ಮಾಡಲಿಲ್ಲ. ಹೀಗಾಗಿ ವಚನದರ್ಶನ ಪುಸ್ತಕ ಮಿಥ್ಯವಾಗಿದ್ದು, ವಚನದರ್ಶನ ಮಿಥ್ಯ ಮತ್ತು ಸತ್ಯ ಪುಸ್ತಕವು ಸತ್ಯವಾಗಿದೆ. ಬಸವಾದಿ ಶರಣರು ವೇದಾಗಮ, ಶಾಸ್ತ್ರಗಳನ್ನು ನಿರಾಕರಿಸಿಲ್ಲ ಎಂದು ಅವರು ಆ ಪುಸ್ತಕದಲ್ಲಿ‌ ಹಾದಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಆದರೆ; ವೇದಕ್ಕೆ ಒರೆಯ ಕಟ್ಟುವೆ, ಆಗಮನದ ಮೂಗ ಕೊಯ್ಯುವೆ, ತರ್ಕದ ಬೆನ್ನಬಾರನೆತ್ತುವೆ ಈ ಸಾಲುಗಳಿಂದ ಶರಣರು ವೇದ, ಶಾಸ್ತ್ರದ ಪರವಾಗಿ ಇದ್ದಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಶರಣರು ಇದ್ದಲ್ಲಿಯೇ ಸ್ವರ್ಗ ಸೃಷ್ಠಿಸಿಕೊಳ್ಳುವ ಹಾದಿ ತೋರಿದರು. ಶರಣರು ದೇವಲೋಕದ ಆಮೀಷವನ್ನು ಜನರಿಗೆ ತೋರಲಿಲ್ಲ. ವೈದಿಕರು ದೇವಲೋಕದ ಆಮೀಷ ತೋರಿಸಿ ಜನರನ್ನು ದಾರಿ ತಪ್ಪಿಸಿದರು. ಬಸವಾದಿ ಶರಣರು ಸಾಮಾಜಿಕವಾಗಿದ್ದ ಶೋಷಣೆಯ ಅನಿಷ್ಠಗಳನ್ನು ಖಂಡಿಸಿದ್ದರು. ಇತ್ತೀಚೆಗೆ ಕೋಟ್ಯಾಂತರ ಜನ ಗಂಗೆಯಲ್ಲಿ‌ ಮುಳುಗೆದ್ದರು. ಆದರೆ ಅಂತಹ ಮೌಢ್ಯತೆಗಳ ವಿರುದ್ಧ ಶರಣರು ಅನೇಕ ವಚನಗಳನ್ನು ರಚಿಸಿದ್ದಾರೆ. ಹೀಗಾಗಿ ನಾವುಗಳು ಸ್ವತಃ ವಚನಗಳನ್ನು ಓದಲು‌ ಮುಂದಾಗಬೇಕು. ಅದರಿಂದ ವೈದಿಕರ ಕುತಂತ್ರ ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ. ಸಕಲ ಜೀವಾತ್ಮರಲ್ಲೂ ಸಮಾನತೆಯ ಕಂಡವರು ಬಸವಾದಿ ಶರಣರು. ವೀರಶೈವ ಮಹಾಸಭಾದವರು ಕಾಲ್ಪನಿಕ ವ್ಯಕ್ತಿಗಳ ಜಯಂತಿ ಆಚರಣೆ ನಿಲ್ಲಿಸಬೇಕು. ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಕ ಎಂದು ಮನಃಪೂರ್ವಕವಾಗಿ ಒಪ್ಪಿಕೊಳ್ಳಬೇಕು. ಎಲ್ಲ ಜಾತಿ, ಪಂಗಡಗಳು‌ ಮರೆಯಾಗಿ ನಾವೆಲ್ಲ ಲಿಂಗಾಯತರು ಎಂಬ ಭಾವ ಮೂಡಬೇಕು ಎಂದು ಹೇಳಿದರು.

Advertisements

ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮಿಗಳು ಮಾತನಾಡಿ, ವಚನಗಳು ಪವಿತ್ರವಾಗಿವೆ. ಅವುಗಳ ದರ್ಶನವಾಗುತ್ತದೆ ಎಂಬ ದೃಷ್ಠಿಯಿಂದ ವಚನ ದರ್ಶನ ಪುಸ್ತಕ ಬಿಡುಗಡೆಗೆ ಒಪ್ಪಿಕೊಂಡಿದ್ದೆ. ಆದರೆ ಅದು ವಿರುದ್ಧವಾಗಿದೆ ಎಂಬುದು ನಂತರ ಅರ್ಥವಾಯಿತು. ಇದೀಗ ಹೊರ ಬಂದಿರುವ ವಚನ ದರ್ಶನ ಮಿಥ್ಯ ಮತ್ತು ಸತ್ಯ ಗ್ರಂಥವು ವಿರೋಧಿಗಳಿಗೆ ತಾರ್ಕಿಕ ಮತ್ತು ಸೈದ್ಧಾಂತಿಕವಾಗಿ ಉತ್ತರ ನೀಡಿದೆ. ಈ ಪುಸ್ತಕ ಬಹಳ ಶ್ರೇಷ್ಠವಾಗಿದೆ. ಮತ್ತು ಅಪಚಾರ ಹಾಗೂ ಸ್ವಾಭಿಮಾನಕ್ಕೆ ದಕ್ಕೆ ಬಂದಾಗ ಧ್ವನಿಯೆತ್ತುವ ಕಾರ್ಯವಾಗಲಿ ಎಂದರು.

ಜಾಗತಿಕ ಲಿಂಗಾಯತ ಮಹಾಸಭಾ, ವೀರಶೈವ ಮಹಾಸಭಾ, ಧಾರವಾಡ ಮತ್ತು ಹುಬ್ಬಳ್ಳಿ ಬಸವಕೇಂದ್ರ ಹಾಗೂ ವಿವಿಧ ಸಂಘಟಕರು, ಬಸವಾಭಿಮಾನಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಭು ನಡಕಟ್ಟಿ ವಂದನಾರ್ಪಣೆ ಮಾಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X