ಸಂಘಪರಿವಾರ ಹೊರತಂದಿದ್ದ ‘ವಚನ ದರ್ಶನ’ ಪುಸ್ತಕವನ್ನು ರದ್ದುಗೊಳಿಸಲು ಒತ್ತಾಯಿಸಿ, ಮುಟ್ಟುಗೋಲು ಹಾಕಲು ಠರಾವು ಪಾಸು ಮಾಡಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಸರ್ವಾನುಮತದಿಂದ ಧಾರವಾಡದಲ್ಲಿ ನಡೆದ ‘ವಚನ ದರ್ಶನ ಮಿಥ್ಯ v/s ಸತ್ಯ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.
ಸಂಘಪರಿವಾರ ಹೊರತಂದಿದ್ದ ‘ವಚನ ದರ್ಶನ’ ಕೃತಿಯಿಂದ ಲಿಂಗಾಯತ ಧರ್ಮ ಮತ್ತು ಶರಣರ ತತ್ವಕ್ಕೆ ಮಸಿ ಬಳಿಯುವ ಕೆಲಸವಾಗಿದೆ. ಈ ಕೃತಿಯಲ್ಲಿ ಬಸವಾದಿ ಶರಣರ ವಚನಗಳು ವೇದ, ಉಪನಿಷತ್ತುಗಳಿಂದ ಪ್ರೇರಣೆ ಪಡೆದಿವೆ, ಕಲ್ಯಾಣದಲ್ಲಿ ಅನುಭವ ಮಂಟಪವೇ ಇರಲಿಲ್ಲ, ಬಸವಣ್ಣ ನಾಡಿದ್ದು ಕೇವಲ ಭಕ್ತಿ ಚಳುವಳಿ, ಬಸವಣ್ಣ ವೇದ, ಶಾಸ್ತ್ರಗಳನ್ನು ಒಪ್ಪಿದ್ದರು ಎಂಬಿತ್ಯಾದಿ ಸುಳ್ಳುಗಳನ್ನು ಹರಿಬಿಟ್ಟಿದ್ದಾರೆ. ಈ ಕಾರಣದಿಂದ ಈ ಕೃತಿಯನ್ನು ಕೂಡಲೇ ರದ್ದುಗೊಳಿಸುವಂತೆ ಒತ್ತಾಯಿಸಿ ಈ ಮೂಲಕ ಕೂಡಲೇ ಠರಾವು ಪಾಸು ಮಾಡಲು ಸರ್ಕಾರ ಮುಂದಾಗಬೇಕು ಎಂದು ಮಹಾಸಭಾ ಒತ್ತಾಯಿಸಿತು.