ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗ್ರಾಮದ ಹೊತಪೇಟೆ ಸರಕಾರ ಪ್ರೌಢ ಶಾಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತ್ಯೋತ್ಸವ ಅಂಗವಾಗಿ ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆಯಿಂದ ಮಕ್ಕಳಿಗೆ ಸೈಕಲ್ ವಿತರಿಸಲಾಯಿತು.
ವರ್ಲ್ಡ್ ವಿಷನ್ ಇಂಡಿಯಾ ವ್ಯವಸ್ಥಾಪಕ ಅನಿಲ್ ತೆಜಪ್ಪ ಮಾತನಾಡಿ, ʼಡಾ.ಅಂಬೇಡ್ಕರ್ ಅವರ ಬದುಕು-ಹೋರಾಟ ಇಂದಿನ ಮಕ್ಕಳು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕುʼ ಎಂದರು.
ಶಾಲೆಯ ಮುಖ್ಯಗುರು ರಾಜೇಶ್ವರಿ ಮಾತನಾಡಿ, ʼಆಡಂಬರದ ಆಚರಣೆಗಿಂತ ಅವಶ್ಯಕತೆ ಉಳ್ಳವರಿಗೆ ಆಸರೆ ಆಗಬೇಕು. ವಿವಾಹ ಕಾರ್ಯಕ್ರಮ ಸರಳವಾಗಿ ಆಚರಿಸಿಕೊಂಡು ಅದರ ಉಳಿತಾಯ ಹಣವನ್ನು ಬಡ ಮಕ್ಕಳಿಗೆ ಸೈಕಲ್ ಉಡುಗೊರೆಯಾಗಿ ನೀಡಿದ ದಾನಿಗಳಿಗೆ ಕೃತಜ್ಞತೆ ಅರ್ಪಿಸುವೆʼ ಎಂದರು.
ಶಿಕ್ಷಕರಾದ ನಾಗಣ್ಣ ಎಲಗಟ್ಟಿ ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶ ಜೀವನವನ್ನು ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸುದ್ದಿ ಓದಿದ್ದೀರಾ? ಈದಿನ ಎಕ್ಸ್‌ಕ್ಲೂಸಿವ್ ಬ್ರೇಕಿಂಗ್ ನ್ಯೂಸ್: ಮುನಿರತ್ನ ವಿರುದ್ಧ ಚಾರ್ಜ್‌ಶೀಟ್ ಹಾಕಲು ಸ್ಪೀಕರ್ ಅನುಮತಿ!
ಎಸ್‌ಡಿಎಂಸಿ ಅಧ್ಯಕ್ಷ ಮಾರುತಿ ನಾಟಕ ಜೀವರಾಜ್ ಅಯ್ಯಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ್ ಮಡಿನಾಳ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಧರ್ಮಣ್ಣ ಯಾದವ್, ಉಪಾಧ್ಯಕ್ಷ ಬಾಬುರಾವ್ ಗ್ರಾಮದ ಹಿರಿಯರಾದ ಭೀಮಣ್ಣ ಯಾದಗಿರಿ, ನಿಂಗಣ್ಣ ಕಲ್ಲೂರ್, ಮುರಿಗೆಪ್ಪ ಸಾಹುಕಾರ, ಶರಣಪ್ಪ ಮಡಿವಾಳ, ಭಾಷೆ ಕುರೇಶಿ, ರಾಬರ್ಟ್, ಅಶೋಕ್, ಪೋಷಕರು ಮತ್ತು ಎಸ್ಸ್‌ಡಿಎಂಸ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಶಿಕ್ಷಕ ಅಯ್ಯಣ್ಣ ವಿಶ್ವಕರ್ಮ ನಿರೂಪಿಸಿದರು.