ರಾಜ್ಯ ರೈತ ಸಂಘ ಹಾಗೂ ವಾಸುದೇವ ಮೇಟಿ ಬಣದ ಹಸಿರು ಸೇನೆಯ ವತಿಯಿಂದ ‘ನಮ್ಮ ಹೊಲ, ನಮ್ಮ ದಾರಿ’ ಯೋಜನೆಯನ್ನು ಕೈಗೆತ್ತಿಕೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮ ಪಂಚಾಯತಿ ಅಧಿಕಾರಿ’ಗೆ ಮನವಿ ಮಾಡುವ ಮೂಲಕ ಒತ್ತಾಯಿಸಿದರು.
ನಮ್ಮ ಹೊಲ ನಮ್ಮ ದಾರಿ ಯೋಜನೆಯ ದಾರಿಗಳು ಬಹಳ ಹದಗೆಟ್ಟಿದ್ದು, ರೈತರಿಗೆ ಅನಾನುಕೂಲವಾಗಿವೆ. ಕಳೆದ ವರ್ಷ ವಿಪರೀತ ಮಳೆಯಿಂದಾಗಿ ರಸ್ತೆಗಳು ಇನ್ನೂ ಹದಗೆಟ್ಟಿವೆ. ಈ ಬಾರಿಯೂ ವಿಪರೀತ ಮಳೆಬಂದರೆ ರೈತರ ಜೀವನ ಗಂಭೀರ ಸ್ಥಿತಿಗೆ ತಲುಪುತ್ತದೆ. ಹೀಗಾಗಿ ಕೂಡಲೇ ಕ್ರಿಯಾ ಯೋಜನೆಯಲ್ಲಿ ಸರಿಪಡಿಸಿ, ರೈತರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಗುರುಪಾದಪ್ಪ ಬಂಕದ ಹೇಳಿದರು.
ಇದನ್ನು ಓದಿದ್ದೀರಾ? ಧಾರವಾಡ | ಆರ್‌ಎಸ್ಎಸ್’ನ ‘ವಚನ ದರ್ಶನ’ ಪುಸ್ತಕ ರದ್ದುಗೊಳಿಸಲು ಜೆಎಲ್ಎಮ್ ಒತ್ತಾಯ
ಈ ವೇಳೆ ಬೆಳೆರಕ್ಷಕ ರೈತ ಸಂಘದ ಪದಾಧಿಕಾರಿಗಳು, ರೈತರು, ಹಸಿರು ಸೇನಾ ಪದಾಧಕಾರಿಗಳು, ಯುವರೈತರು ಇದ್ದರು.