ಉಚ್ಚಂಗಿದುರ್ಗದಿಂದ ಬಸ್ ನಲ್ಲಿ ವಾಪಸು ಸ್ವಗ್ರಾಮಕ್ಕೆ ಹಿಂದಿರುಗುವ ವೇಳೆ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ ನೆಡೆದಿದ್ದು, ಇದರಲ್ಲಿ ಸಾಕ್ಷಿ ನಾಶಕ್ಕಾಗಿ ಯತ್ನವೂ ನೆಡೆದಿದೆ. ಪ್ರಕರಣದ ಅತ್ಯಾಚಾರ ಆರೋಪಿಗಳಿಗೆ ಉಗ್ರ ಶಿಕ್ಷೆ ವಿಧಿಸುವಂತೆ ಸಿಪಿಐಎಂನ ಎನ್ ಎಫ್ ಐ ಡಬ್ಲ್ಯೂ ಮಹಿಳಾ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ದಾವಣಗೆರೆ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯದ ಗೃಹ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು “ಮಾರ್ಚ್ 31ರ ಸಂಜೆ ಯುಗಾದಿ ಹಬ್ಬದಂದು ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಉತ್ಸವಾಂಬಾ ದೇವಿಯ ದರ್ಶನಕ್ಕೆ ಆಗಮಿಸಿ ದೇವರ ದರ್ಶನ ಮಾಡಿ, ಸಂತ್ರಸ್ತ ಮಹಿಳೆ ವಾಪಸ್ ಸ್ವಗ್ರಾಮ ದಾವಣಗೆರೆ ತಾಲೂಕಿನ ಜೆರೆಕಟ್ಟೆ ಗ್ರಾಮಕ್ಕೆ ತೆರಳಲು, ಅಂದು ರಾತ್ರಿ ಸುಮಾರು 8:30ರ ಸಮಯದಲ್ಲಿ ಉಚ್ಚಂಗಿದುರ್ಗದಿಂದ ಖಾಸಗಿ ಬಸ್ ಒಂದರಲ್ಲಿ ಪ್ರಯಾಣಿಸಿದ್ದಾರೆ. ನಂತರ ಹತ್ತಿರದ ಗ್ರಾಮಗಳಲ್ಲಿ ಪ್ರಯಾಣಕರು ಇಳಿದಿದ್ದಾರೆ. ಬಸ್ಸಿನಲ್ಲಿ ಮಕ್ಕಳೊಂದಿಗೆ ಮಹಿಳೆ ಪ್ರಯಾಣಿಸುತ್ತಿರುವಾಗ ಬಸ್ಸಿನಲ್ಲಿ ಇತರೆ ಯಾವುದೇ ಪ್ರಯಾಣಿಕರು ಇಲ್ಲದಿರುವುದನ್ನು ದುರುಪಯೋಗ ಪಡಿಸಿಕೊಂಡು ಬಸ್ ನ ಚಾಲಕ, ನಿರ್ವಾಹಕ ಹಾಗೂ ಕ್ಲೀನರ್ 3 ಜನ ಸೇರಿ ಬಸ್ಸಿನಲ್ಲಿಯೇ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಅರಸೀಕೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತು ಆರೋಪಿಗಳು ಈ ಪ್ರಕರಣದಿಂದ ತಪ್ಪಿಸಿಕೊಳ್ಳಲು ಪ್ರಭಾವ ಬೀರುವ ಪ್ರಯತ್ನ ನಡೆಸಿದ್ದಾರೆ” ಎಂದು ಆರೋಪಿಸಿದರು.
“ರಾಜ್ಯ ಸರ್ಕಾರದ ಗೃಹ ಮಂತ್ರಿ ಜಿ ಪರಮೇಶ್ವರ್ ರವರು, ಹಾಗೂ ಪೊಲೀಸರು ಕೂಡಲೇ ನ್ಯಾಯಯುತ ತನಿಖೆ ನಡೆಸಿ ಪ್ರಕರಣದಲ್ಲಿ ಆರೋಪಿಗಳಿಗೆ ಉಗ್ರ ಶಿಕ್ಷೆ ಆಗುವಂತೆ ಎನ್ ಎಫ್ ಐ ಡಬ್ಲ್ಯೂ ರಾಷ್ಟ್ರೀಯ ಮಹಿಳಾ ಒಕ್ಕೂಟ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ಒತ್ತಾಯಿಸುತ್ತೇವೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷೆಯ ಸಹೋದರನ ಹಸ್ತಕ್ಷೇಪ, ಸದಸ್ಯರಿಂದ ಕಛೇರಿಗೆ ಬೀಗ.
“ಜಾತ್ರೆಯ ಸಂದರ್ಭದಲ್ಲಿ ಸಾಕಷ್ಟು ಪೊಲೀಸ್ ಬಂದೋಬಸ್ತ್ ಮತ್ತು ಸಂಚಾರ ಪೊಲೀಸರ ಗಸ್ತು ಇದ್ದರೂ ಇಂತಹ ಘಟನೆ ನಡೆದಿರುವುದು ಅಮಾನವೀಯ ಕೃತ್ಯವಾಗಿದೆ. ಘಟನೆಗೆ ಕಾರಣರಾದ ಈ ಮೂರು ಜನರಿಗೆ ಉಗ್ರ ಶಿಕ್ಷೆಯನ್ನು ಕೊಡಬೇಕು ಮತ್ತು ಸಂತ್ರಸ್ತ ಮಹಿಳೆಗೆ ಸರ್ಕಾರ ಪರಿಹಾರ ಕೊಡಬೇಕೆಂದು” ಎನ್ ಎಫ್ ಐ ಡಬ್ಲ್ಯೂ ಮಹಿಳಾ ಸಂಘಟನೆ ಒತ್ತಾಯಿಸಿದೆ.
ಈ ವೇಳೆ ಎನ್ ಎಫ್ ಐ ಡಬ್ಲ್ಯೂ ಮಹಿಳಾ ಒಕ್ಕೂಟ ಸಂಘಟನೆಯ ಮಹಿಳಾ ಮುಖಂಡರಾದ ಹುಚ್ಚಂಗಮ್ಮ, ಹೆಚ್ ಜಿ ಮಂಜುಳಾ, ಅನ್ನಪೂರ್ಣ, ಸರೋಜಾ , ಉಚ್ಚಂಗಿಮ್ಮ ,ಶಕುಂತಲಮ್ಮ, ನಿರ್ಮಲ ,ಸ್ನೇಹಲತಾ, ಜ್ಯೋತಿಲಕ್ಷ್ಮಿ, ಲತಾ ಹಾಗು ಹಲವು ಮುಖಂಡರು ಹಾಜರಿದ್ದರು.