ಸಂವಿಧಾನವನ್ನು ರಕ್ಷಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ. ಈ ನಿಟ್ಟಿನಲ್ಲಿ ಎಪ್ರಿಲ್ 26, 2025ರಂದು ದಾವಣಗೆರೆ ನಗರದಲ್ಲಿ ಸಂವಿಧಾನ ಸಂರಕ್ಷಣಾ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ರಾಜ್ಯಮಟ್ಟದ, ರಾಷ್ಟ್ರೀಯ ಮಟ್ಟದ ನಾಯಕರು ಆಗಮಿಸಲಿದ್ದಾರೆ. ಎಲ್ಲರೂ ಸ್ವಯಂ ಪ್ರೇರಿತರಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸಂವಿಧಾನ ರಕ್ಷಣಾ ಪಡೆ ಮುಖಂಡರು ಕರಪತ್ರ ಬಿಡುಗಡೆಗೊಳಿಸಿ ಕರೆ ನೀಡಿದರು.

“ಮುಂದಿನ ಪೀಳಿಗೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಸಮಾನತೆಯ ತತ್ವಗಳಾದ ‘ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು’ ಎನ್ನುವ ವಾಕ್ಯದಡಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಈ ಕಾರ್ಯಕ್ರಮಕ್ಕೆ ಸ್ವಯಂ ಪ್ರೇರಿತರಾಗಿ ಮಹಿಳೆಯರು, ಬುದ್ದಿಜೀವಿಗಳು, ಹೋರಾಟಗಾರರು, ಯುವಕರು, ವಿದ್ಯಾರ್ಥಿಗಳು, ಸಮಾನ ಮನಸ್ಕರು ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದಲಿತ ಕೈಗಾರಿಕೋದ್ಯಮಿಗಳ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ, ಕಚೇರಿ ಉದ್ಘಾಟನೆ.
ಇದೇ ವೇಳೆ ಸಂವಿಧಾನ ಸಂರಕ್ಷಣಾ ಸಮಾವೇಶದ ಕರಪತ್ರ ಬಿಡುಗಡೆ ಮಾಡಲಾಯಿತು. ಈ ವೇಳೆ ದಸಂಸ ಮುಖಂಡ ಚಿತ್ರಲಿಂಗಪ್ಪ ಗಾಂಧಿ ನಗರ, ಪುರಸಭೆ ಸದಸ್ಯ ಸೈಯದ್ ಗೌಸ್ಪೀರ್, ಮಾನವ ಹಕ್ಕು ಆಯೋಗ ಮಹಿಳಾ ಘಟಕ ಸದಸ್ಯೆ ಸಲ್ಮಾ ಹಸ್ಪಿಯಾ, ರಾಜು ಗರಗ, ಪತ್ರಕರ್ತ ಸೈಯದ್ ತನ್ವೀರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.