ಸಮಾಜ ಬದಲಾವಣೆ ಆಗಬೇಕಾದರೆ ಅದು ಕಾನೂನಿನ ಮೂಲಕ ಮಾತ್ರ ಎಂದು ಸಾಧ್ಯ ಎಂದು ಪ್ರಗತಿಪರ ಚಿಂತಕಿ ಮತ್ತು ಖ್ಯಾತ ಲೇಖಕಿ ಡಾ. ಎಚ್ ಎಸ್ ಅನುಪಮಾ ಅಭಿಪ್ರಾಯಪಟ್ಟರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸ್ನಾತಕ ವಿಭಾಗದಲ್ಲಿ (ಎನ್‌ಇಪಿ) ಆಯೋಜಿಸಿದ್ದ, ಡಾ. ಬಿ ಆರ್ ಅಂಬೇಡ್ಕರರ ಜಯಂತ್ಯೋತ್ಸವದ ಅಂಗವಾಗಿ ‘ಡಾ.ಬಿ.ಆರ್.ಅಂಬೇಡ್ಕರ ಮತ್ತು ಮಹಿಳೆ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಒಂದು ಸಮಾಜದ ಸೌಖ್ಯ ಮತ್ತು ಪ್ರಗತಿಗೆ ಮಹಿಳೆಯರ ಸಬಲೀಕರಣ ಅತೀ ಅಗತ್ಯವಾದದ್ದು. ಮಹಿಳೆಯರಿಗೆ ಸಮರ್ಪಕ ಶಿಕ್ಷಣ, ಉತ್ತಮ ಆರೋಗ್ಯ ಸೇವೆ, ಆರ್ಥಿಕ ಸ್ವಾವಲಂಬನೆ ಮತ್ತು ತೀರ್ಮಾನಾತ್ಮಕ ಹಕ್ಕುಗಳನ್ನು ನೀಡಿದಾಗ ಮಾತ್ರ ಸಮಾನತೆಯ ಪರಿಕಲ್ಪನೆಗೆ ನಿಜವಾದ ಅರ್ಥ ದೊರೆಯುತ್ತದೆ. ಮಹಿಳೆಯರ ಸಬಲೀಕರಣದಿಂದ ಅವರು ತಮ್ಮ ಕುಟುಂಬ ಅಲ್ಲದೆ ಸಮುದಾಯದ ಬೆಳವಣಿಗೆಗೂ ಪ್ರಮುಖ ಶಕ್ತಿಯಾಗಿ ಪರಿಣಮಿಸುತ್ತಾರೆ” ಎಂದರು.
ಇದನ್ನೂ ಓದಿ: ವಿಜಯಪುರ | ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ: ವಿಜಯ್ ಕುಮಾರ್
ಬಳಿಕ ಯುಜಿ ಹಾಗೂ ಪಿಜಿ ಬೋಧಕ ಮತ್ತು ಬೋಧಕೇತರ ಸಂಘಟನಾತ್ಮಕ ಹೋರಾಟಗಾರರೊಂದಿಗೆ ಸಂವಾದ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಯ ಸ್ನಾತಕ ವಿಭಾಗದ ಸಂಯೋಜಕಿ ಡಾ. ಜಿ ಸೌಭಾಗ್ಯ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.