ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರು ಏಪ್ರಿಲ್ 25 ಮತ್ತು 26ರಂದು ಊಟಿಯಲ್ಲಿ ಆಯೋಜಿಸಿರುವ ವಿಶ್ವವಿದ್ಯಾಲಯದ ಉಪಕುಲಪತಿಗಳು ಮತ್ತು ರಿಜಿಸ್ಟ್ರಾರ್‌ಗಳ ಎರಡು ದಿನಗಳ ಸಮಾವೇಶವನ್ನು ತಮಿಳುನಾಡು ಕಾಂಗ್ರೆಸ್ ಮತ್ತು ಸಿಪಿಐಎಂ ತೀವ್ರವಾಗಿ ಟೀಕಿಸಿವೆ.
ರಾಜ್ಯಪಾಲರು ಮಸೂದೆಗಳಿಗೆ ಅನಿರ್ದಿಷ್ಟಾವಧಿಗೆ ಒಪ್ಪಿಗೆ ನೀಡದೆ ತಡೆಹಿಡಿದಿರುವುದನ್ನು ಸುಪ್ರೀಂ ಕೋರ್ಟ್ ಸಂವಿಧಾನಕ್ಕೆ ವಿರುದ್ಧವಾದುದ್ದು ಎಂದು ಹೇಳಿದೆ. ರಾಜ್ಯಪಾಲರ ಕ್ರಮವು ಸುಪ್ರೀಂ ಕೋರ್ಟ್‌ನ ಈ ತೀರ್ಪು ಮತ್ತು ಸಂವಿಧಾನದ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಮುಖ್ಯಸ್ಥ ಕೆ. ಸೆಲ್ವಪೆರುಂಥಗೈ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಡಿಎಂಕೆ ನಾಯಕನನ್ನು ಸಚಿವರಾಗಿ ನೇಮಿಸಲು ನಕಾರ; ತಮಿಳುನಾಡು ರಾಜ್ಯಪಾಲರಿಗೆ ಸುಪ್ರೀಂ ಚಾಟಿ
“ಸುಪ್ರೀಂ ಕೋರ್ಟ್ ತೀರ್ಪಿನ ನಂತರ ರಾಜ್ಯಪಾಲರು ರಾಜೀನಾಮೆ ನೀಡಬೇಕಿತ್ತು. ಆ ತೀರ್ಪನ್ನು ಗೌರವಿಸದೆ ರಾಜ್ಯಪಾಲರು ಉಪಕುಲಪತಿಗಳ ಸಮಾವೇಶವನ್ನು ಕರೆಯುವುದು ಸಂವಿಧಾನವನ್ನು ಅಗೌರವಿಸಿದ್ದಂತೆ” ಎಂದು ಎಕ್ಸ್‌ನಲ್ಲಿ ಸೆಲ್ವಪೆರುಂಥಗೈ ಪೋಸ್ಟ್ ಮಾಡಿದ್ದಾರೆ.
ಇದೇ ರೀತಿ ರಾಜ್ಯಪಾಲರು ಆಯೋಜಿಸಿರುವ ಸಮಾವೇಶವನ್ನು ಎಡ ಪಕ್ಷ ಕೂಡಾ ವಿರೋಧಿಸಿದೆ. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ ಈ ಸಮಾವೇಶವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ. “ರಾಜ್ಯಪಾಲ ರವಿ ಅವರು ‘ಆರ್‌ಎಸ್‌ಎಸ್ ಏಜೆಂಟ್’ ಆಗಿ ವರ್ತಿಸುತ್ತಿದ್ದಾರೆ” ಎಂದು ಸಿಪಿಐಎಂ ನಾಯಕರು ಆರೋಪಿಸಿದ್ದಾರೆ.
அறிக்கை
— Selvaperunthagai K (@SPK_TNCC) April 21, 2025
தமிழ்நாடு ஆளுநராக பொறுப்பேற்ற ஆர்.என். ரவி கடந்த மூன்றாண்டுகளாக மக்களால் தேர்ந்தெடுக்கப்பட்ட தமிழ்நாடு அரசுக்கு எதிராக தொடர்ந்து செயல்பட்டு வருகிறார். அரசமைப்புச் சட்டப்படி மாநில அமைச்சரவையின் ஆலோசனையின்படி தான் ஆளுநர் செயல்பட முடியும். ஆனால், அவற்றுக்கு விரோதமாக… pic.twitter.com/0Bbb993sox
“ಸುಪ್ರೀಂ ಕೋರ್ಟ್ ತೀರ್ಪು ರಾಜ್ಯಪಾಲರ ಅತಿರೇಕವನ್ನು ತಡೆದಿದೆ. ಈ ಹಿನ್ನಡೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ, ಅವರು ಈ ಸಮಾವೇಶದ ಮೂಲಕ ವಿವಾದವನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ” ಎಂದು ಷಣ್ಮುಗಮ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ತಮಿಳುನಾಡು | ರಾಜ್ಯ ಸರ್ಕಾರದ ಭಾಷಣ ಓದದೆ ಸದನದಿಂದ ಸಭಾತ್ಯಾಗ ಮಾಡಿದ ರಾಜ್ಯಪಾಲ
ತಮಿಳುನಾಡು ವಿಧಾನಸಭೆಯು ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಯಿಂದ ರಾಜ್ಯಪಾಲರನ್ನು ತೆಗೆದುಹಾಕುವ ಮಸೂದೆಗಳನ್ನು ಅಂಗೀಕರಿಸಿದೆ. ಅದನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದೆ. ಈ ಬೆಳವಣಿಗೆಗಳ ಹೊರತಾಗಿಯೂ ಈಗ ಸಮಾವೇಶವನ್ನು ಕರೆಯುವುದು ಸಂವಿಧಾನಬಾಹಿರವಾಗಿದೆ” ಎಂದೂ ಹೇಳಿದರು. ಹಾಗೆಯೇ ಉಪಕುಲಪತಿಗಳು ಹಾಜರಾಗದಂತೆ ತಿಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಏಪ್ರಿಲ್ 8ರಂದು ಸುಪ್ರೀಂ ಕೋರ್ಟ್ ರಾಜ್ಯಪಾಲರು ಮೂರು ತಿಂಗಳೊಳಗೆ ಮಸೂದೆಗೆ ಒಪ್ಪಿಗೆ ನೀಡುವ, ಅದನ್ನು ಸದನಕ್ಕೆ ಹಿಂತಿರುಗಿಸುವ ಅಥವಾ ರಾಷ್ಟ್ರಪತಿಗಳಿಗೆ ಕಳುಹಿಸುವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದೆ. ಹಾಗೆಯೇ ತಮಿಳುನಾಡು ಶಾಸಕಾಂಗವು ಅಂಗೀಕರಿಸಿದ, ಆದರೆ ರಾಜ್ಯಪಾಲರ ಅನುಮೋದನೆ ಬಾಕಿಯಿರುವ ಹತ್ತು ಮಸೂದೆಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
