ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಯೊಬ್ಬರು ಮೇಲಾಧಿಕಾರಿ ಕಿರುಕುಳದಿಂದ ಮನನೊಂದು ಅತ್ಮಹತ್ಯೆಗೆ ಯತ್ನಿಸಿರುವ ಘಟನೆ, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬಸ್ ಡಿಪೊದಲ್ಲಿ ಶುಕ್ರವಾರ ನಡೆದಿದೆ.
ಒಂದು ವಾರ ರಜೆ ಹಾಕದೆ, ವಾರದ ರಜೆಯಲ್ಲೂ ಕೆಲಸ ಮಾಡಿದ್ದರು ಹಾಗೂ ಮಗುವಿಗೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು. ವಾರದ ರಜೆ ದಿನ ಕೆಲಸ ಮಾಡಿದ್ದರಿಂದ ರಜೆ ನೀಡಿ ಎಂದು ಎಟಿಎಸ್ ಪುಟ್ಟಸ್ವಾಮಿ ಅವರಲ್ಲಿ ಮನವಿ ಮಾಡಿದ್ದರು. ರಜೆ ನೀಡದೆ ಗೈರು ಎಂದು ನಮೂದಿಸಿದ್ದಾರೆ ಎಂದು ಎಂ ವಿ ಮಧು ಆರೋಪಿಸಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ l ಗ್ರಾ.ಪಂ ಸಹಾಯಕ ಲೆಕ್ಕಾಧಿಕಾರಿ ಶವ ಕಾರಿನಲ್ಲಿ ಪತ್ತೆ
ಎಟಿಎಸ್ ಪುಟ್ಟಸ್ವಾಮಿ ಅವರಲ್ಲಿ ಮನವಿ ಮಾಡಿದರೂ ಸ್ಪಂದಿಸುತ್ತಿರಲಿಲ್ಲ, ತುಂಬ ದಿನ ರಜೆ ಮಾಡಿದವರಿಗೆ ಹಾಜರಾತಿ ನೀಡಿ ರಜೆ ಕೊಟ್ಟಿದ್ದಾರೆ ಹಾಗೂ ಹಣ ನೀಡಿದರೆ ರಜೆ ಕೊಡುತ್ತೇನೆಂದು ಹೇಳಿದರು ಎಂದು ಅಧಿಕಾರಿಗಳ ವರ್ತನೆ ಖಂಡಿಸಿ, ಎಂ ವಿ ಮಧು ಶುಕ್ರವಾರ ಪತ್ರ ಬರೆದಿಟ್ಟು ಡಿಪೋದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅಲ್ಲಿದ್ದವರು ಮಧು ಅವರನ್ನು ಕಡೂರು ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಎಂ ವಿ ಮಧು ಕುಟುಂಬದವರು ತಿಳಿಸಿದ್ದಾರೆ.
