ಅಂಬೇಡ್ಕರ್ ಸ್ವಾಭಿಮಾನಿ ಸೇನೆಯಿಂದ ಚಿತ್ರದುರ್ಗ ಜಿಲ್ಲಾ ಸಮಿತಿ ಹಿರಿಯೂರು ತಾಲ್ಲೂಕು ಹುಲಗಲಕುಂಟೆ ಗ್ರಾಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಇದೇ ವೇಳೆ ಹುಲಗಲಕುಂಟೆಯಲ್ಲಿ ನೂತನ ಗ್ರಾಮ ಶಾಖೆಯನ್ನು ಹಾಗೂ ನಾಮಫಲಕ ಉದ್ಘಾಟನೆ ಮಾಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮತ್ತು ಅಧ್ಯಕ್ಷತೆ ವಹಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಕೆ ಮಾತನಾಡಿ, “ಹೆಣ್ಣು ಮಕ್ಕಳಿಗೆ ಶಿಕ್ಷಣದ ಹಕ್ಕು ಪಡೆದು ಕೊಳ್ಳಲು ಜ್ಯೋತಿ ಬಾ ಪುಲೆ ಹಾಗೂ ಸಾವಿತ್ರಿ ಬಾಪುಲೆ ಕೊಡುಗೆ ಅಪಾರವಾಗಿದೆ. ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಪಾಲು ಸಿಗುವಂತೆ ಮತ್ತು ಮತದಾನದಲ್ಲಿ ಹಕ್ಕು ಸಿಗುವಂತೆ ಕಾನೂನು ರೂಪಿಸಿದರು. ಮತದಾನ ಶ್ರೇಷ್ಠ ದಾನ ಎಂದು ತಿಳಿಸಿದರು. ಅವರ ಬಗ್ಗೆ ತಿಳಿದುಕೊಳ್ಳಬೇಕು” ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷರಾದ ರಾಘವೇಂದ್ರ ಮಾತನಾಡಿ, “ಸಮಾಜದವರು ಶಿಕ್ಷಣವಂತರಾಗಿ ಒಳ್ಳೆ ಜೀವನ ರೂಪಿಸಿಕೊಂಡು ಬಾಳಬೇಕು ಹಾಗೂ ದುಶ್ಚಟಗಳಿಂದ ದೂರವಿದ್ದು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬದುಕಬೇಕು” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಎಪ್ರಿಲ್ 26ಕ್ಕೆ ಸಂವಿಧಾನ ಸಂರಕ್ಷಣಾ ಸಮಾವೇಶ, ಚನ್ನಗಿರಿಯಲ್ಲಿ ಕರಪತ್ರ ಬಿಡುಗಡೆ.
ಕಾರ್ಯಕ್ರಮದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಅಲ್ಪಸಂಖ್ಯಾತರ ಘಟಕ ಜಿಲ್ಲಾಧ್ಯಕ್ಷ ಸಾಧಿಕ್, ತಾಲ್ಲೂಕು ಗೌರವಾಧ್ಯಕ್ಷಗೋವಿಂದಪ್ಪ, ತಾಲ್ಲೂಕು ಅಧ್ಯಕ್ಷ ಶಿವರಾಜ್ ಕುಮಾರ್, ತಾಲ್ಲೂಕು ಉಪಾಧ್ಯಕ್ಷ ಹನಮಂತು, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ರಂಗಸ್ವಾಮಿ (ಆಟೋ), ತಾಲ್ಲೂಕು ಕಾರ್ಯದರ್ಶಿ ಕೆಂಚಪ್ಪ (ಆಟೋ), ತಿಪ್ಪೇಶ್ (ಸೂರಗೊಂಡನಹಳ್ಳಿ) ಗ್ರಾಮಶಾಖೆಯ ಪದಾಧಿಕಾರಿಗಳಾದ ಗೌರವ ಅಧ್ಯಕ್ಷ ಓಂಕಾರ್ ಎಚ್, ಟಿ, ಅಧ್ಯಕ್ಷ ನಾಗರಾಜ್ ಎಂ, ಉಪಾಧ್ಯಕ್ಷ ವಿಜಯ್, ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಎಲ್, ಕಾರ್ಯದರ್ಶಿ ಪ್ರಸನ್ನ ಎಂ, ಪ್ರಸನ್ನ ಕೆ, ಖಜಾಂಚಿ ಜ್ಯೋತಿ ಸ್ವಾಮಿ ಆರ್, ಸಂಘಟನಾ ಕಾರ್ಯದರ್ಶಿ ಮಧು, ಪ್ರವೀಣ, ಸದಸ್ಯರಾದ ಲೋಕೇಶ್, ರಾಘು ಮಧು ಎಂ, ರವಿತೇಜ ಎಚ್, ರಾಘವೇಂದ್ರ, ಗ್ರಾಮದ ಹಿರಿಯ ಮುಖಂಡರುಗಳಾದ ರೇವಣ್ಣ, ತಿಪ್ಪೇಸ್ವಾಮಿ, ಬಾಲಣ್ಣ, ಕೇಶವಣ್ಣ, ನಾಗರಾಜು, ರಂಗನಾಥ, ಪುರುಷೋತ್ತಮ, ಹನುಮಂತಪ್ಪ ಹಾಗೂ ಗ್ರಾಮದ ಹಿರಿಯ ಹಾಗೂ ಕಿರಿಯ ಮುಖಂಡರು ಹಾಜರಿದ್ದರು.
