ಚೀಟಿ ಹಣದ ವಿಚಾರವಾಗಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅಮೃತಾಪುರ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿ ಸಂಜುನಾಯ್ಕ (26), ಎಂಬ ಯುವಕನನ್ನು ರುದ್ರೇಶನಾಯ್ಕ ಎಂಬಾತ ಹತ್ಯೆ ಮಾಡಿದ್ದಾನೆ. ಅಮೃತಾಪುರ ಸೇವಾಲಾಲ್ ಸಂಘದಲ್ಲಿ ಚೀಟಿ ವ್ಯವಹಾರ ನಡೆಸುತ್ತಿದ್ದ ವೇಳೆ, ಸಂಜುನಾಯ್ಕ ಚೀಟಿ ಸರಿಯಾಗಿ ಕಟ್ಟದೇ ಗಲಾಟೆ ಮಾಡುತ್ತಿದ್ದ. ಇದರಿಂದ ಚೀಟಿ ಸದಸ್ಯರು ಆ ಸ್ಥಳದಿಂದ ವಾಪಸ್ ಕಳುಹಿಸಿದ್ದರು, ಹೀಗಾಗಿ ಮನೆಗೆ ಬಂದ ಸಂಜುನಾಯ್ಕ ಚೀಟಿ ಸದಸ್ಯರ ಜೊತೆ ಫೋನಿನಲ್ಲಿ ವಾದ ನಡೆಸಿದ್ದ, ಪರಿಣಾಮವಾಗಿ ನೇರ ಜಗಳಕ್ಕೆ ನಡೆಯುತ್ತಿರುವ ಸಮಯದಲ್ಲಿ ರುದ್ರೇಶನಾಯ್ಕ, ಸಂಜುನಾಯ್ಕನಿಗೆ ದೊಣ್ಣೆಯಲ್ಲಿ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವದಿಂದ ಸಂಜುನಾಯ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಜಗಳ ತಪ್ಪಿಸಲು ಬಂದ ಅವಿನಾಶ್ ಎಂಬ ವ್ಯಕ್ತಿಗೆ, ರುದ್ರೇಶನಾಯ್ಕ ಕಚ್ಚಿ ಗಾಯಗೊಳಿಸಿದ್ದಾನೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಮೇಲಾಧಿಕಾರಿ ಕಿರುಕುಳ ಆರೋಪ: ಸರ್ಕಾರಿ ಬಸ್ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ
ಕೊಲೆ ಮಾಡಿದ ರುದ್ರೇಶನಾಯ್ಕ ಎಂಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು, ಈ ಕುರಿತು ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
