ಕೊಡಗು ಜಿಲ್ಲೆ, ಮಡಿಕೇರಿ ಗ್ರಾಮಾಂತರ ತಾಲ್ಲೂಕಿನ ಚೆಟ್ಟಳ್ಳಿ ಕಾಫಿ ತೋಟವೊಂದರಲ್ಲಿ ಮರ ಕಪಾತು ಮಾಡುತ್ತಿದ್ದ ವೇಳೆ ಕಾರ್ಮಿಕನ ಮೇಲೆ ಮರ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ಚೆಟ್ಟಳ್ಳಿಯ ಕಾಫಿ ಬೋರ್ಡ್ ಸಮೀಪದಲ್ಲಿರುವ ಮೇಜರ್ ಕೊಂಗೇಟಿರ ಮೊಣ್ಣಪ್ಪರವರ ಕಾಫಿ ತೋಟದಲ್ಲಿ ಸೋಮವಾರ ಮಧ್ಯಾಹ್ನ ಘಟನೆ ನಡೆದಿದ್ದು, ಮೃತ ಕಾರ್ಮಿಕ ಮಣಿ (25) ಮೂಲತಃ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನವರಾಗಿದ್ದಾರೆ.
ಮಳೆ ಬರುತಿದ್ದ ಕಾರಣಕ್ಕೆ ಕಾರ್ಮಿಕನೋರ್ವನನ್ನು ಏಣಿಯಿಂದ ಇಳಿಸಲು ಕಾರ್ಮಿಕ ಮಣಿ ತೆರಳಿರುವಾಗ ಮಳೆ ಗಾಳಿಯ ರಭಸಕ್ಕೆ ಸುಮಾರು 60 ಅಡಿ ಎತ್ತರದ ಬಳಂಜಿ ಮರ ಬಿದ್ದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿರುವುದಾಗಿ ಪ್ರತ್ಯಕ್ಷದರ್ಶಿಗಳಿಂದ ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಹೊನ್ನೂರು ಗೌರಮ್ಮ ಅವರಿಗೆ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರಧಾನ
ಸ್ಥಳಕ್ಕೆ ಚೆಟ್ಟಳ್ಳಿ ಉಪ ಠಾಣಾಧಿಕಾರಿ ದಿನೇಶ್ ಎಂ.ಎನ್, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ನಿರೀಕ್ಷಕ ಚಂದ್ರಶೇಖರ್, ಪಿಎಸ್ಐ ಶ್ರೀನಿವಾಸಲು ಹಾಗೂ ಸಿಬ್ಬಂದಿಗಳು ಬೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.