ತುರ್ತು ಸಂದರ್ಭಕ್ಕೆ ಅನುಕೂಲವಾಗಲೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ನಮ್ಮ ಕ್ಲಿನಿಕ್ ಚಿಕಿತ್ಸಾ ಕೇಂದ್ರವನ್ನು ಆರಂಭಿಸಿದೆ. ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ಒಟ್ಟು 24 ನಮ್ಮ ಕ್ಲಿನಿಕ್‌ಗಳಿದ್ದು, ಕೊರಟಗೆರೆಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ನಮ್ಮ ಕ್ಲಿನಿಕ್ ತುರ್ತು ವೇಳೆಯಲ್ಲಿ ಸಹಕಾರಿಯಾಗಲಿದೆ ಎಂದು ಗೃಹಸಚಿವ ಡಾ. ಜಿ ಪರಮೇಶ್ವರ ಅವರು ತಿಳಿಸಿದರು.
ಕೊರಟಗೆರೆ ಪಟ್ಟಣದಲ್ಲಿ ನೂತನವಾಗಿ ಆರಂಭವಾದ ನಮ್ಮ ಕ್ಲಿನಿಕ್ ಮತ್ತು ತೋಟಗಾರಿಗೆ ಇಲಾಖೆ ನೂತನ ಕಚೇರಿ ಉದ್ಘಾಟನೆ ಹಾಗೂ ಪಟ್ಟಣ ಪಂಚಾಯತ್ ಉಪಯುಕ್ತ ವಿವಿಧ ವಾಹನಗಳನ್ನು ಹಸ್ತಾಂತರಿಸಿ ಮಾತನಾಡಿದರರು.
ನಿತ್ಯವೂ ಕೂಲಿ ಕಾರ್ಮಿಕರ ಸಮಸ್ಯೆಯಿಂದ ಪ.ಪಂಚಾಯಿತಿಯು ಸ್ವಚ್ಛತೆಗೆ ಮತ್ತು ಕಾಮಾಗಾರಿ ಬಳಕೆಗೆ 38.71 ಲಕ್ಷದ ಜೆಸಿಬಿ ಮತ್ತು 15ನೇ ಹಣಕಾಸಿನ ಯೋಜನೆಯಲ್ಲಿ 2 ಆಟೋ ಟಿಪ್ಪರ್ ಖರೀದಿ ಮಾಡಲಾಗಿದೆ. ಹಸಿ ಮತ್ತು ಒಣ ಕಸ ಬೇರ್ಪಡಿಸಲು ಕಸದ ಬುಟ್ಟಿಯನ್ನು ಸಿದ್ದತೆ ಮಾಡಿಕೊಂಡಿದ್ದು, ವಿತರಣೆ ವೇಳೆ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಿಗೆ ಮುಖ್ಯವಾಗಿ ಅರಿವು ಮೂಡಿಸಬೇಕು” ಎಂದು ಹೇಳಿದರು.

“ಸ್ವಚ್ಛತೆ ಅರಿವು ಕಾರ್ಯಕ್ರಮ ಜಿಲ್ಲಾಮಟ್ಟದಲ್ಲಿ ನಡೆಯಬೇಕು. ಹಸಿ ಮತ್ತು ಒಣ ಕಸವು ಗ್ಯಾಸ್ ಉತ್ಪಾದನೆಗೆ ಸಹಕಾರಿಯಾಗಲಿದ್ದು, ಸಾರ್ವಜನಿಕರು ಸ್ಥಳೀಯ ಮಹಾನಗರ ಪಾಲಿಕೆ, ಪುರಸಭೆ, ಪ.ಪಂ, ಗ್ರಾ.ಪಂಚಾಯಿತಿಗಳ ಜೊತೆ ಕೈ ಜೋಡಿಸಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿದಾಗ ಮಾತ್ರ ಪರಿಸರ ಸಂರಕ್ಷಣೆ ಮಾಡಲು ಸಾಧ್ಯ” ಎಂದರು.
“ಕೊರಟಗೆರೆ ಪ.ಪಂ ಮುಂಭಾಗದಲ್ಲಿನ ನೂತನ ಮಾರುಕಟ್ಟೆ ಅಂಗಡಿ ಮಳಿಗೆಗಳ ನಿರ್ಮಾಣಕ್ಕೆ ಎಸ್‌ಎಫ್‌ಸಿ ಅನುದಾನದಲ್ಲಿ 60ಲಕ್ಷ ಕಾಮಗಾರಿಗೆ ಮತ್ತು ಸಂತೆ ಮೈದಾನ ಅಭಿವೃದ್ಧಿಗೆ ಅಡಿಗಲ್ಲು ಹಾಕಲಾಗಿದೆ” ಎಂದು ಹೇಳಿದರು.

“ರಾಜ್ಯದಲ್ಲಿ ಕಳ್ಳತನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಅನ್ವಯ ಸಿಸಿಟಿವಿ ಅಳವಡಿಕೆಯ ಬಗ್ಗೆ ಪೊಲೀಸ್ ಇಲಾಖೆ ತೀರ್ಮಾನ ಮಾಡಿದೆ. ₹15 ಲಕ್ಷ ವೆಚ್ಚದಲ್ಲಿ ಕೊರಟಗೆರೆಯ 28 ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಇಲಾಖೆಯು ಸಿಸಿಟಿವಿ ಅಳವಡಿಸಲಿದೆ. ಕೊರಟಗೆರೆ ಕ್ರೀಡಾಂಗಣ ಮೈದಾನದ ಅಭಿವೃದ್ಧಿಗೆ ₹3 ಕೋಟಿ ಹಣ ಸರ್ಕಾರದಿಂದ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಸುಸಜ್ಜಿತ ಕಲಾಭವನ ನಿರ್ಮಾಣ ಮಾಡಲಾಗುವುದು” ಎಂದು ತಿಳಿಸಿದರು.
“ಪೌರಕಾರ್ಮಿಕರಿಗೆ ನಿರ್ಮಿಸಲಾದ ನಿವೇಶನವು 15 ದಿನದ ಒಳಗೆ ಫಲಾನುಭವಿಗಳಿಗೆ ಹಂಚಿಕೆಯಾಗಬೇಕು. ಇಲ್ಲವಾದರೆ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಗೃಹಸಚಿವ ಡಾ.ಜಿ ಪರಮೇಶ್ವರ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಜನಿವಾರ ತೆಗೆಸಿದರೆ ವಿವಾದ, ತಾಳಿ ತೆಗೆಸಿದಾಗ ಸುದ್ದಿಯೇ ಆಗುವುದಿಲ್ಲ: ಸಚಿವ ಕೆ ಎನ್ ರಾಜಣ್ಣ
2 ಲಕ್ಷ ರೂ. ಚೆಕ್ ವಿತರಣೆ: ಗುಡುಗು ಸಹಿತ ಮಳೆಗೆ ಚೀಲಗಾನಹಳ್ಳಿ ಮತ್ತು ವಡ್ಡಗೆರೆ ಮಾರ್ಗ ಮಧ್ಯೆ ವಿದ್ಯುತ್ ತಂತಿ ತುಂಡಾಗಿ ದ್ವಿಚಕ್ರ ವಾಹನ ಸವಾರನ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಸ್ಪರ್ಶದಿಂದ ಚೀಲಗಾನಹಳ್ಳಿ ಗ್ರಾಮದ ಯೋಗಿಶ್ ಮೃತಪಟ್ಟಿದ್ದರು. ಈ ಹಿನ್ನೆಲೆ ಬೆವಿಕಂ ವತಿಯಿಂದ ₹5 ಲಕ್ಷ ಪರಿಹಾರ ನೀಡಿದೆ. ₹5 ಲಕ್ಷದಲ್ಲಿ ₹ ಲಕ್ಷದ ಚೆಕ್ಕನ್ನು ಗೃಹ ಸಚಿವರು ಮೃತ ಕುಟುಂಬಕ್ಕೆ ವಿತರಣೆ ಮಾಡಿದ್ದು, ಉಳಿದ ₹3 ಲಕ್ಷ ಹಣವನ್ನು ಶೀಘ್ರದಲ್ಲಿಯೇ ತಲುಪಿಸಲಾಗುವುದು” ಎಂದು ಬೆಸ್ಕಾಂ ಇಲಾಖೆ ಭರವಸೆ ನೀಡಿದೆ.
ಈ ವೇಳೆ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ ಸಿಇಓ ಪ್ರಭು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಶೋಕ್, ತಹಶೀಲ್ದಾರ್ ಮಂಜುನಾಥ್, ಪ.ಪಂ ಅಧ್ಯಕ್ಷೆ ಅನಿತಾ ಮತ್ತು ಮುಖ್ಯಾಧಿಕಾರಿ ಉಮೇಶ್ ಸೇರಿದಂತೆ ಸದಸ್ಯರು ಇದ್ದರು.