ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಪ್ರವಾಸಿಗರ ಮೇಲೆ ಮಂಗಳವಾರ ನಡೆದ ಭಯೋತ್ಪಾದಕರ ದಾಳಿಯಲ್ಲಿ 28 ಮಂದಿ ಮೃತಪಟ್ಟಿದ್ದು, ಮೇಲ್ನೋಟಕ್ಕೆ ದಾಳಿಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಸೇರಿದಂತೆ ಹಲವು ಕಡೆ ಚರ್ಚೆಯಾಗುತ್ತಿದೆ.
ಉಗ್ರರ ದಾಳಿಗೆ ಕಣಿವೆ ರಾಜ್ಯದಲ್ಲಿ ಸೇನೆಯ ಕಡಿತ, ಗುಪ್ತಚರ ವೈಫಲ್ಯ ಹಾಗೂ ಭದ್ರತಾ ವೈಫಲ್ಯ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಕೇಂದ್ರ ಸರ್ಕಾರವು ಇತ್ತೀಚಿನ ಕೆಲವು ತಿಂಗಳುಗಳಿಂದ ಕಾಶ್ಮೀರದಲ್ಲಿ ಸೇನೆಯನ್ನು ಕಡಿತಗೊಳಿಸಿದೆ. ಆದರೆ ಇವೆಲ್ಲ ವೈಫಲ್ಯಗಳು ಸಮಸ್ಯೆಗಳನ್ನು ಬಿಜೆಪಿ ನಾಯಕರು ಚರ್ಚಿಸುತ್ತಿಲ್ಲ.
ಮಾಧ್ಯಮವೊಂದರಲ್ಲಿ ಮಾತನಾಡಿದ ನಿವೃತ್ತ ಮೇಜರ್ ಜನರಲ್ ಜಿ ಡಿ ಭಕ್ಷಿ, ಪಾಕಿಸ್ತಾನದಿಂದ ಅತ್ಯಂತ ಗಂಭೀರ ಮತ್ತು ಸ್ವೀಕಾರಾರ್ಹವಲ್ಲದ ಪ್ರಚೋದನೆ, ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಮಾಡುವ ಸಮಯ ಬಂದಿದೆ. ಪ್ರತೀಕಾರದ ಸಿದ್ಧಾಂತವನ್ನು ಅಳವಡಿಸಿಕೊಳ್ಳಬೇಕಿದೆ. ಇದು ಜೋರಾಗಿ ಮಾತನಾಡುವ ಸಮಯವಲ್ಲ. ಇದು ಕ್ರಮ ಕೈಗೊಳ್ಳುವ ಸಮಯ, ಆ ಮೂರ್ಖ ಕದನ ವಿರಾಮ ಇನ್ನೂ ಏಕೆ ಜಾರಿಯಲ್ಲಿದೆ?. ಕಣಿವೆಯಲ್ಲಿ ಸೇನೆಯನ್ನು ಹೆಚ್ಚಿಸಲಾಗಿಲ್ಲ. ಹೆಚ್ಚು ಆರ್ಥಿಕ ನೆರವನ್ನು ನೀಡಲಾಗಿಲ್ಲ. ಒಂದು ಲಕ್ಷಕ್ಕೂ ಅಧಿಕ ಸೇನೆಯನ್ನು ಕಡಿತಗೊಳಿಸಲಾಗಿದೆ. ನೆರವು ನೀಡುತ್ತಿರುವ ಹಣ ಎಲ್ಲಿ ಹೋಯಿತು. ಇಂತಹ ಹಲವಾರು ಕಾರಣಗಳಿಂದ ದಾಳಿ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕರು ಈ ಕಾರಣಗಳನ್ನು ಮಾತ್ರ ಮುಖ್ಯವಾಹಿನಿಯಲ್ಲಿ ಚರ್ಚಿಸುತ್ತಿಲ್ಲ. ತಮ್ಮದೆ ಪ್ರಚೋದನಾಕಾರಿಯಾದ ಹೇಳಿಕೆಗಳನ್ನು ನೀಡುತ್ತಿರುವುದನ್ನು ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜಾತಿ-ಜನಿವಾರಕ್ಕೆ ಜೋತುಬಿದ್ದ ‘ಜಾತ್ಯತೀತ’ ಸರ್ಕಾರ
ಇಂದು ಜಮ್ಮು- ಕಾಶ್ಮೀರ ಬಂದ್ ಗೆ ಮೆಹಬೂಬಾ, ಮಿರ್ವೈಝ್ ಕರೆ
ಪಹಲ್ಗಾಂವ್ ನಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಬುಧವಾರ ಜಮ್ಮು ಕಾಶ್ಮೀರದಲ್ಲಿ ಬಂದ್ ಆಚರಿಸುವಂತೆ ಪಿಡಿಪಿ ಮುಖ್ಯಸ್ಥೆ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತು ಹುರಿಯತ್ ಮುಖಂಡ ಮಿರ್ವೈಝ್ ಉಮರ್ ಫಾರೂಕ್ ಅವರು ಪ್ರತ್ಯೇಕ ಕರೆ ನೀಡಿದ್ದಾರೆ.
ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಬಂದ್ ಆಚರಿಸುವಂತೆ ಮೆಹಬೂಬಾ ಮುಫ್ತಿ ಹಾಗೂ ಮಿರ್ವೈಝ್ ಕರೆ ನೀಡಿರುವುದು ಇದೇ ಮೊದಲು.”ಇದು ಕೇವಲ ಆಯ್ದ ಕೆಲವರ ವಿರುದ್ಧ ನಡೆದ ದಾಳಿಯಲ್ಲ. ಇದು ನಮ್ಮ ಮೇಲೆ ನಡೆದ ದಾಳಿಯೂ ಹೌದು. ಈ ಶೋಕ ಮತ್ತು ಸಂಕಷ್ಟದ ಸಂದರ್ಭದಲ್ಲಿ ನಾವು ಜತೆಗಿರುತ್ತೇವೆ ಎಂದು ಮೆಹಬೂಬಾ ಹೇಳಿದ್ದಾರೆ.
ಜಮ್ಮು ಚೇಂಬರ್ ಅಂಡ್ ಬಾರ್ ಅಸೋಸಿಯೇಶನ್ ನೀಡಿರುವ ಬಂದ್ ಕರೆಯ ಬೆನ್ನಲ್ಲೇ ಮೆಹಬೂಬಾ ಕೂಡ ಬಂದ್ ಗೆ ಕರೆ ನೀಡಿದ್ದಾರೆ.
“ಪಹಲ್ಗಾಂವ್ ನಲ್ಲಿ ಅಮಾಯಕರ ಮೇಲೆ ನಡೆದ ಘೋರ ಘಟನೆಯಲ್ಲಿ ಜೀವ ಕಳೆದುಕೊಂಡ ಅಮಾಯಕರ ಗೌರವಾರ್ಥವಾಗಿ ಬಂದ್ ಆಚರಿಸುವಂತೆ ನೀಡಿರುವ ಬಂದ್ ಕರೆಗೆ ಇಡೀ ಕಾಶ್ಮೀರ ಜನತೆ ಒಗ್ಗಟ್ಟಾಗಿ ಸ್ಪಂದಿಸಬೇಕು” ಎಂದು ಅವರು ಹೇಳಿದ್ದಾರೆ.
ಈ ಪೈಶಾಚಿಕ ಕೃತ್ಯದ ವಿರುದ್ಧ ನಾವು ಒಗ್ಗಟ್ಟಾಗಿ ಇದ್ದೇವೆ ಮತ್ತು ನಮ್ಮ ಮೌನವನ್ನು ನಾವು ಭಯೋತ್ಪಾದನೆ ಒಪ್ಪಿಕೊಂಡಿದ್ದೇವೆ ಎಂದು ತಪ್ಪಾಗಿ ಭಾವಿಸಬಾರದು ಎಂಬ ಸ್ಪಷ್ಟ ಸಂದೇಶವನ್ನು ನಾವು ರವಾನಿಸಬೇಕಿದೆ ಎಂದು ಪಕ್ಷದ ಮುಖ್ಯಸ್ಥ ಯಾಸಿರ್ ರಿಷಿ ಹೇಳಿಕೆ ನೀಡಿದ್ದಾರೆ.
ಈ ನಡುವೆ ಭಯೋತ್ಪಾದಕರು ಜಮ್ಮುವಿನ ಕಿಶ್ತವಾಢ ದಿಂದ, ಕೋಕರ್ನಾಗ್ ಮೂಲಕ ಬೈಸರನ್‌ಗೆ ಬಂದಿರ ಬಹುದು ಎಂದು ಅಧಿಕಾರಿಗಳು ಊಹಿಸಿದ್ದಾರೆ.
Govt failures in Jammu & Kashmir :
— 𝗩eena Jain (@DrJain21) April 23, 2025
> Failed in Thre@t assessment
> Reduction of Manpower in Army
> Intelligence failure
> Security lapse
But Godi media & BJP IT cell never discuss these real problems & Shield Modi 🤐#Pahalgam #PahalgamTerroristAttack
pic.twitter.com/hHxi84XKd7