ಟೆಕ್ಕಿ ಗುರುಪ್ರಸಾದ್ ಆಕೃತಿ ಗುರು ಆಗಿದ್ದೇಗೆ? ಇಲ್ಲಿದೆ ಆಪ್ತ ಮಾತುಕತೆ Akruti Guruprasad | Books | ಜೀವ ಪದ
ಕನ್ನಡದಲ್ಲಿ ವೈಚಾರಿಕತೆ ಇರುವ, ಸಮಾನತೆ ಸಾರುವ ಪುಸ್ತಕಗಳು ಹೆಚ್ಚಾಗಿ ಬರಬೇಕು ಆ ಮೂಲಕ ಓದುಗರು ತಮ್ಮ ಅರಿವನ್ನು ವಿಸ್ತರಿಸಿಕೊಳ್ಳಬೇಕು ಎಂಬ ಆಶಯವನ್ನು ಹೊಂದಿದ ಗುರುಪ್ರಸಾದ್ ಅವರು ಆಕೃತಿ ಪುಸ್ತಕದ ಪ್ರಕಾಶಕರು ಹಾಗೂ ಮಾರಾಟಗಾರರು. ಇವರು ತಮ್ಮ ಪುಸ್ತಕ ಪ್ರೀತಿಯಿಂದಾಗಿ ಸಾಫ್ಟ್‌ವೇರ್ ಉದ್ಯೋಗ ತೊರೆದು ಪುಸ್ತಕ ಮಾರಾಟ ಮತ್ತು ಪ್ರಕಾಶಕರಾದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಸ್ವತಂತ್ರ ಪುಸ್ತಕ ಮಾರಾಟಗಾರರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಗುರುಪ್ರಸಾದ್ ಗೌರಿ.ಕಾಮ್ ಮತ್ತು ನ್ಯಾಯಪಥದ ಸಂಪದಾಕರು. ಇಂದು ವಿಶ್ವ ಪುಸ್ತಕ ದಿನಾಚರಣೆ ಪ್ರಯುಕ್ತ ವಿಶೇಷ ಸಂದರ್ಶನ.