“ನಮ್ಮ ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ಇವತ್ತಿಗೂ ದೇಶದಲ್ಲಿ ವರದಕ್ಷಿಣೆ, ಕೊಲೆ, ಅತ್ಯಾಚಾರಗಳು ನಡೆಯುತ್ತಲೇ ಇವೆ. ಇವುಗಳನ್ನು ಧೈರ್ಯವಾಗಿ ಪ್ರಶ್ನಿಸಬೇಕು. ಪ್ರಶ್ನೆಸಲು ಶಿಕ್ಷಣ ಬಹಳ ಮುಖ್ಯ. ಹಾಗಾಗಿ ಮಕ್ಕಳಿಗೆ ಮೊದಲು ಶಿಕ್ಷಣ ಶಿಕ್ಷಣ ಕೊಡಿಸಬೇಕು. ಅನ್ಯಾಯ, ಅಸಮಾನತೆ ವಿರುದ್ಧ ಧ್ವನಿ ಎತ್ತಲು ಶಿಕ್ಷಣ ಬೇಕು” ಸಂಪನ್ಮೂಲ ವ್ಯಕ್ತಿ ಭವ್ಯ ನರಸಿಂಹಮೂರ್ತಿ ಹೇಳುದರು.
ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ನಾಲಕಾರ ಸರ್ಕಲ್ ಹತ್ತಿರ ಇರುವ ವ್ಯಸನ ಮುಕ್ತಿ ಕೇಂದ್ರದಲ್ಲಿ ರೋಷಣೆ ಸಂಸ್ಥೆ, ಆದರ್ಶ ತಾಲೂಕು ಮಹಿಳಾ ಒಕ್ಕೂಟ ಸಹಯೋಗದಲ್ಲಿ “ಅಂಬೇಡ್ಕರ್ ಉತ್ಸವ” ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
“ಸಂವಿಧಾನದ ಅಡಿಯಲ್ಲಿ ಇರುವ ಜನರ ಮೇಲೆ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರು ಹೋರಾಟ ಮಾಡಿದರು. ಇಂದಿಗೂ ಜನರ ಮೇಲೆ ದೌರ್ಜನ್ಯಗಳು ನಿಂತಿಲ್ಲ. ಯಾಕಂದ್ರೆ ಈ ಸಮಾಜದಲ್ಲಿ ಜಾತಿ, ಧರ್ಮ, ವರ್ಗಗಳ ಆಧಾರದ ಮೇಲೆ ನಿಂತಿದೆ. ಎಂದು ಹೇಳಿದರು.
ಮಹಿಳೆಯರ ಸಮಸ್ಯೆಗಳ ಕುರಿತು ಮಾತನಾಡಿದ ಅವರು, “ಮಹಿಳೆ ಮೊದಲು ಸುಚಿತ್ವ ಕಾಪಾಡಿಕೊಳ್ಳಬೇಕು. ಹೆಣ್ಣುಮಕ್ಕಳು ಆರೋಗ್ಯವಾಗಿ ಇರಲು ಪೌಷ್ಟಿಕ ಆಹಾರವನ್ನು ಕೊಡಬೇಕು. ಮಹಿಳೆಯರು ಆರೋಗ್ಯವಾಗಿ ಇದ್ದಾಗ ಅವರಿಗೆ ಹುಟ್ಟುವ ಮಕ್ಕಳು ಆರೋಗ್ಯವಾಗಿ ಬೆಳೆಯುತ್ತಾರೆ. ಹೆಣ್ಣುಮಕ್ಕಳು ಮನೆಯಲ್ಲಿ ಎಷ್ಟು ಖುಷಿಯಾಗಿ ಇರುತ್ತಾರೂ, ಅಷ್ಟೇ ಇಡೀ ಕುಟುಂಬವೇ ಖುಷಿಯಾಗಿ ಇರುತ್ತದೆ” ಎಂದು ಮಹಿಳೆಯರಿಗೆ ಸಲಹೆ ನೀಡಿದರು.
“ಸಾವಿತ್ರಿ ಬಾಯಿ ಪುಲೆ ಅವರು ಮೊಟ್ಟ ಮೊದಲ ಶಾಲೆಯನ್ನು ಆರಂಭಿದರು. ಯಾವುದೇ ಜಾತಿಯ ಮಹಿಳೆಯರಿಗೆ, ಪುರುಷರಿಗೆ ಶಾಲೆಯಲ್ಲಿ ಶಿಕ್ಷಣ ನೀಡುತ್ತಿದ್ದರು. ಶಿಕ್ಷಣ ಕಲಿಸುವಾಗ ಸಾವಿತ್ರಿ ಬಾಯಿ ಪುಲೆ ಅವರಿಗೆ ಸಮಾಜದಲ್ಲಿ ಸಾಕಷ್ಟು ಅವಮಾನಗಳ ನಡುವೆ ಶಿಕ್ಷಣ ನೀಡುತ್ತಿದ್ದರು. ಆದರೆ ಇವತ್ತಿಗೂ ಸಹಿತ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡುತ್ತಿಲ್ಲ” ಎಂದು ಹೇಳುದರು.
ರೋಷನಿ ಸಂಸ್ಥೆಯ ನಿರ್ದೇಶಕರು ಅನಿತಾ ಡಿಸೋಜ ಅವರು ಪ್ರಸ್ತಾವಿಕ ಮಾತನಾಡಿ, “ಕಾನೂನನ್ನು ಯಾರು ಕೈಗೆ ಎತ್ತಿಕೊಳ್ಳುವ ಅಧಿಕಾರ ಇಲ್ಲ. ಹೋರಾಟ, ಸಂಘಟನೆ ಮೂಲಕ ನ್ಯಾಯದ ಮೂಲಕ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕು” ಎಂದು ಹೇಳಿದರು.
“ಭಾರತ ಸಂವಿಧಾನಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. ಒಂದು ವೇಳೆ ಸಂವಿಧಾನಕ್ಕೆ ಚ್ಯುತಿ ಬಂದರೆ ನಾವೆಲ್ಲ ಹೋರಾಟ ಮಾಡಿ ರಕ್ಷಿಸಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲೆ ಇದೆ. ಅಂಬೇಡ್ಕರ್ ಅವರು ಅನ್ಯಾಯದ ವಿರುದ್ದ ನಿರಂತರ ಪ್ರತಿರೋಧವಿತ್ತು. ಹಾಗೆ ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ನಾವೆಲ್ಲರೂ ಧ್ವನಿಯಾಗಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಹಾಸನ l ವೃದ್ಧನ ಮೇಲೆ ಕಾಡಾನೆ ದಾಳಿ
ಅಂಬೇಡ್ಕರ್ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಷನಿ ಸಂಸ್ಥೆಯ ಮುಖ್ಯಸ್ಥರು ಸಿ ಜಾನೆಟ್ ಪಿಂಟೋ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಸಾಮಾಜಿಕ ಹೋರಾಟಗಾರ ಸುಧೀರಕುಮಾರ ಮಾರೊಳ್ಳಿ, ವಿವಿಧ ಸಂಘಟನೆ ಮುಖಂಡರು ಬಿ. ಆರ್. ಶೆಟ್ಟರ, ರಘುನಾಥ ಗಾಯಕ್ವಾಡ, ಚಂದ್ರಪ್ಪ ಹೊಸಳ್ಳಿ, ಶಿವಾಜಿ ಕಲ್ಲಾಪೂರ, ಕಾಂತೇಶ ಬಾಳೂರ, ಗೀತಾ ತಳವಾರ, ಈರಮ್ಮ ಬಿದರಣ್ಣನವರ, ಸರ್ಪುನ್ನಿಸಾ ಕನವಳ್ಳಿ ಅನೇಕರು ವೇದಿಕೆ ಮೇಲೆ ಉಪಸ್ಥಿತರಿದ್ದರು.
