ಕಾಶ್ಮೀರ ಪ್ರವಾಸದಲ್ಲಿರುವ ಕೊಪ್ಪಳದ ನಾಲ್ಕು ಕುಟುಂಬಗಳ ಸದಸ್ಯರನ್ನು ಕಾರ್ಮಿಕ ಸಚಿವ ಸಂತೋಷ ಲಾಡ್ ಏಪ್ರಿಲ್ 23ರಂದು ಭೇಟಿ ಮಾಡಿ, ಧೈರ್ಯ ಹೇಳಿದ್ದು, ಹೋಟೆಲ್ ಬಿಟ್ಟು ಕದಲದಂತೆ ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.
ಕೊಪ್ಪಳದ ಸಿದ್ದು ಗಣವಾರಿ, ಉದ್ಯಮಿ ಶರಣಪ್ಪ ಸಜ್ಜನ, ಕಾಂಗ್ರೆಸ್ ಮುಖಂಡ ಕಾಟನ್ ಪಾಷಾ ಮತ್ತು ಶಿವಕುಮಾರ ಪಾವಲಿ ಶೆಟ್ಟರ್ ಕುಟುಂಬ ಸದಸ್ಯರ ಜೊತೆ ಮಂಗಳವಾರ ಶ್ರೀನಗರಕ್ಕೆ ತೆರಳಿದ್ದು, ಅಲ್ಲಿಗೆ ಹೋದಾಗಿನಿಂದಲೂ ಹೋಟೆಲ್‌ನಲ್ಲಿಯೇ ಉಳಿದುಕೊಂಡಿದ್ದಾರೆ. ಪ್ರವಾಸ ರದ್ದುಗೊಳಿಸಿ ಬುಧವಾರ(ಇಂದು) ಸಂಜೆ ನವದೆಹಲಿಗೆ ವಾಪಸ್ ಬರಲು ತೀರ್ಮಾನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಕಾಶ್ಮೀರ ಪಹಲ್ಗಾಮ್ ನಲ್ಲಿ ಉಗ್ರವಾದಿಗಳ ದಾಳ – ಬಿಷಪ್ ಖಂಡನೆ
ಕೊಪ್ಪಳದ ಪ್ರವಾಸಿಗರು ತಂಗಿದ್ದ ಹೋಟೆಲ್‌ಗೆ ಸಚಿವ ಸಂತೋಷ ಲಾಡ್ ಭೇಟಿ ನೀಡಿ, “ಎಲ್ಲಿಯೂ ಹೋಗಬೇಡಿ, ಹೊಟೇಲ್‌ನಲ್ಲಿಯೇ ಇರಿ. ಸಂಜೆ ವೇಳೆಗೆ ನಿಮ್ಮ ಊರುಗಳಿಗೆ ಹೋಗಲು ಪ್ರಯಾಣದ ವ್ಯವಸ್ಥೆ ಮಾಡಲಾಗುವುದೆಂದು ಹೇಳಿದ್ದಾರೆಂದು ಎಂದು ಕೊಪ್ಪಳದ ಪ್ರವಾಸಿಗರು ಹೇಳಿದ್ದಾರೆ.