- ರಾಜ್ಯಕ್ಕೆ ಹಾಗೂ ಬಿಜೆಪಿಗೆ ನಿಮ್ಮ ಕೊಡುಗೆ ಏನು?
- ರಾಜ್ಯ ಪ್ರವಾಸ ಮಾಡಲು ಬಿಎಸ್‌ವೈ ಯಾಕೆ ಬೇಕು?
ಮತ ಪಡೆಯುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮುಖ ತೋರಿಸುತ್ತೀರಿ. ರಾಜ್ಯಕ್ಕೆ ಹಾಗೂ ಪಕ್ಷಕ್ಕೆ ನಿಮ್ಮ ಕೊಡುಗೆ ಏನು ಎಂದು ರಾಜ್ಯ ಬಿಜೆಪಿ ನಾಯಕರನ್ನು ಎಂಪಿ ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.
ಪಕ್ಷದ ನಾಯಕರ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಪಕ್ಷದಿಂದ ಸಮನ್ಸ್ ಪಡೆದ ಬೆನ್ನಲ್ಲೇ ಎಂಪಿ ರೇಣುಕಾಚಾರ್ಯ ಮತ್ತೆ ವಾಗ್ದಾಳಿ ಮುಂದುವರಿಸಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಬಿಎಸ್ ಯಡಿಯೂರಪ್ಪ ನಿವಾಸದಲ್ಲಿ ಅವರನ್ನು ಭೇಟಿಯಾದ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ನನ್ನ ಹೋರಾಟ ಹಾಗೂ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
“ನಿಮಗೆ ಅಪಮಾನ ಮಾಡಿದವರ ಬಗ್ಗೆ ಸುಮ್ಮನಿರಲು ಆಗುವುದಿಲ್ಲ ಎಂದು ಯಡಿಯೂರಪ್ಪ ಅವರಿಗೆ ಹೇಳಿದ್ದೇನೆ. ಅವರಿಗೆ ವಯಸ್ಸಾಯಿತು ಎಂದು ಅಧಿಕಾರದಿಂದ ಕೆಳಗಿಳಿಸಲಾಯಿತು. ಹಾಗಿದ್ದರೆ ರಾಜ್ಯ ಪ್ರವಾಸ ಮಾಡಲು ಯಡಿಯೂರಪ್ಪ ಯಾಕೆ ಬೇಕು?” ಎಂದು ಹರಿಹಾಯ್ದರು.
“ಯಡಿಯೂರಪ್ಪ ಅವರ ಮಾತಿಗೆ ಯಾವಾಗಲೂ ಗೌರವ ಇದೆ. ಇನ್ಮುಂದೆ ಬಹಿರಂಗವಾಗಿ ಎಲ್ಲ ವಿಚಾರ ಮಾತಾಡುವುದಿಲ್ಲ. ಹಾಗಂತ ನನ್ನನ್ನು ಟಾರ್ಗೆಟ್ ಮಾಡಲು ಯಾರಿಂದಲೂ ಆಗಲ್ಲ. ನನಗೆ ಯಡಿಯೂರಪ್ಪ, ನರೇಂದ್ರ ಮೋದಿ ಹಾಗೂ ಪಕ್ಷದ ಆಶೀರ್ವಾದವಿದೆ. ಯಾರಿಗೂ ಹೆದರುವುದಿಲ್ಲ, ನನ್ನನ್ನು ತುಳಿಯಲು ಯಾರಿಂದಲೂ ಆಗಲ್ಲ” ಎಂದು ಪರೋಕ್ಷವಾಗಿ ಎಚ್ಚರಿಸಿದ್ದಾರೆ.
ಲುಂಗಿಯಲ್ಲಿ ನಲುಗುತ್ತಿರುವ ಪಕ್ಷಕ್ಕೆ ಒಂದು ಗತಿ ಕಾಣಿಸುವಂತೆ ಎಲ್ಲಾ ಲಕ್ಷಣಗಳು ನಿಚ್ಚಳವಾಗಿದೆ