ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ವಿರೋಧಿಸಿ ಮತ್ತು ಕೇಂದ್ರ ಸರ್ಕಾರದ ವೈಫಲ್ಯವನ್ನು ಖಂಡಿಸಿ ದಲಿತ ವಿದ್ಯಾರ್ಥಿ ಪರಿಷತ್ ವಿಜಯಪುರ ಜಿಲ್ಲಾ ಘಟಕ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಗಿದೆ.
ದವಿಪ ಮುಖಂಡ ಅಕ್ಷಯ ಕುಮಾರ ಅಜಮನಿ ಮಾತನಾಡಿ, “ಕಾಶ್ಮೀರದಲ್ಲಿ ಉಗ್ರರ ದಾಳಿಯಿಂದ ಸುಮಾರು 25ಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದಾರೆ. ಹಾಡ ಹಗಲೇ ಭಯವಿಲ್ಲದೆ ಉಗ್ರರು ಗುಂಡು ಹಾರಿಸುತ್ತಾರೆ ಎಂದರೆ ಅದು ಹೇಗೆ ಸಾಧ್ಯ? ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ, ಗೃಹ ಇಲಾಖೆ, ಗುಪ್ತಚರ ಇಲಾಖೆ ಮಾಡುತ್ತಿರುವುದೇನು? ಕೇಂದ್ರ ಸರ್ಕಾರದ ಕಾರ್ಯನಿರ್ವಹಣೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದಕ್ಕೆ ಉತ್ತರ ಕೊಡಲೇಬೇಕು” ಎಂದು ಆಗ್ರಹಿಸಿದರು.
ಈ ಹಿಂದೆಯೂ ಪುಲ್ವಾಮದಲ್ಲಿ 42 ಯೋಧರ ಮೇಲೆ ಬಾಂಬ್ ದಾಳಿ ನಡೆಯಿತು. ಅವರಿಗೂ ನ್ಯಾಯ ಕೊಡಿಸುವ ಕೆಲಸ ಈ ಸರ್ಕಾರದಿಂದ ಸಾಧ್ಯವಾಗಿಲ್ಲ. ಉಗ್ರರ ದಾಳಿಯಿಂದ ಮೃತಪಟ್ಟ ಜನರಿಗೆ ರಕ್ಷಣೆ ನೀಡಬೇಕು ಅದೇ ರೀತಿಯಾಗಿ ಭಯಭೀತರಾಗಿರುವ ದೇಶದ ಜನರಿಗೂ ಕೂಡ ಕಾನೂನು ಸುವ್ಯವಸ್ಥೆಯಿಂದ ಭದ್ರತೆ ನೀಡಬೇಕು. ಅನಾಹುತದ ವೈಫಲ್ಯಕ್ಕೆ ಕಾರಣವಾದ ಪ್ರಧಾನ ಮಂತ್ರಿ, ರಕ್ಷಣಾ ಸಚಿವರು ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು” ಒತ್ತಾಯಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಾದೇಶ್ ಚಲವಾದಿ, ಶಂಕರ್ ಬಸರಗಿ, ಪಂಡಿತ್ ಯಲಗೋಡ, ಯುವರಾಜ್ ಓಲೇಕಾರ್, ಪ್ರಶಾಂತ್ ದಾಂಡೇಕರ್, ನವೀನ್, ಸಂದೇಶ್, ದಾವುದ, ಅಪ್ಪಷ್ ಇದ್ದರು.
ಇದನ್ನೂ ಓದಿ: ವಿಜಯಪುರ | ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಧ್ವನಿಯೆತ್ತುವ ಕೆಲಸವಾಗಲಿ: ವಿರಾತಿಶಾನಂದ ಸ್ವಾಮೀಜಿ