ಆನಂದಪುರದ ಎಂ. ಎಸ್ ಎಲೆಕ್ಟ್ರಾನಿಕ್ಸ್ ಅಂಗಡಿಯ ಮಾಲೀಕರಾದ ರಾಘವೇಂದ್ರ ಎಂಬುವವರು ಗೆಳೆಯರ ಬಳಗ ವಾಟ್ಸಪ್ ಗ್ರೂಪ್ ನಲ್ಲಿ ಸಂವಿಧಾನ ಹಾಗೂ ಅಂಬೇಡ್ಕರ್ ವಿರೋಧಿಯಾಗಿ ಮೆಸೇಜನ್ನು ಮಾಡಿದ್ದು ಇದನ್ನು ಬಲವಾಗಿ ವಿರೋಧಿಸಿ ದಲಿತ ಸಂಘರ್ಷ ಸಮಿತಿ ಹಾಗೂ ಜೈ ಭೀಮ್ ಸಂಘಟನೆ ರಾತ್ರೋರಾತ್ರಿ ಆನಂದಪುರ ಬಸ್ ನಿಲ್ದಾಣದಲ್ಲಿ ಧರಣಿ ಮಾಡಿದರು .
ದಲಿತ ಸಂಘರ್ಷ ಸಮಿತಿಯ ತಾಲೂಕು ಅಧ್ಯಕ್ಷರಾದ ಅಕ್ಷಯ್ ಮಾತನಾಡಿ ಅಂಬೇಡ್ಕರ್ ಹಾಗೂ ಸಂವಿಧಾನ ವಿರೋಧಿಯಾಗಿ ಅವ್ಯಾಚ್ಯ ಶಬ್ದದಿಂದ ಮೆಸೇಜ್ ಮಾಡಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ.ರಾಘವೇಂದ್ರನು ಸಂವಿಧಾನ ಬದಲಾಯಿಸಬೇಕೆಂಬ ಆಶಯವನ್ನು ಹೊಂದಿರುವ ಹಾಗೆ ಕಾಣುತ್ತದೆ. ಅಷ್ಟು ಕೇವಲವಾಗಿ ಬಿಟ್ಟಿದ್ಯ ನಮ್ಮ ಅಂಬೇಡ್ಕರ್ ಹಾಗೂ ಅವರು ಬರೆದ ಸಂವಿಧಾನ ಇವರಿಗೆಗೆ ಎಂದು ಬಲವಾಗಿ ವಿರೋಧಿಸಿದರು.ಸಾರ್ವಜನಿಕವಾಗಿ ಬಸ್ ನಿಲ್ದಾಣದಲ್ಲಿ ರಾಘವೇಂದ್ರ ಕ್ಷಮಾಪಣೆ ಕೇಳಬೇಕು ಇಲ್ಲವಾದರೆ ಅವರ ವಿರುದ್ಧ ದೂರು ದಾಖಲಿಸುತ್ತೇವೆ ಮತ್ತು ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಹೀಗೆ ಮುಂದುವರಿಯುವುದು ಎಂದು ಸೂಚಿಸಿದರು.

ಜೈ ಭೀಮ್ ಸಂಘಟನೆ ಅಧ್ಯಕ್ಷ ವಿಕಾಸ್ ಮಾತನಾಡಿ ಅಂಬೇಡ್ಕರ್ ಬಗ್ಗೆ ಯಾರಾದರು ಕೆಟ್ಟದಾಗಿ ಮಾತಾಡಿದರೆ ನಮ್ಮ ಸಂಘಟನೆಯವರು ಕೈಕಟ್ಟಿ ಕೂರುವುದಿಲ್ಲ ಇದರ ವಿರುದ್ಧ ಹೋರಾಟದ ಮೂಲಕ ಉತ್ತರ ನೀಡುತ್ತೇವೆ ಎಂದರು.
ದಲಿತ ಸಂಘರ್ಷ ಸಮಿತಿಯ ಉಪಾಧ್ಯಕ್ಷ ನಾಗರಾಜ್ ಮಾತನಾಡಿ ಈ ದೇಶದಲ್ಲಿ ಪ್ರತಿಯೊಬ್ಬರು ಸಮಾನತೆಯಿಂದ ಬದುಕುವ ಹಕ್ಕನ್ನು ಅಂಬೇಡ್ಕರ್ ಅವರು ನೀಡಿದ್ದಾರೆ ಅಂತಹ ವ್ಯಕ್ತಿಯ ಬಗ್ಗೆ ಯಾರಾದರು ಸೊಕ್ಕಿನಿಂದ ಇಲ್ಲಸಲ್ಲದ ಆರೋಪ ಮಾಡಿದರೆ ಅವರ ಸೊಕ್ಕನ್ನು ನಮ್ಮ ಸಂಘಟನೆ ಅಡಗಿಸುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಸಂಚಾಲಕರು ಅಮಿತ್,ದಲಿತ ಸಂಘರ್ಷ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ್,ಜೈ ಭೀಮ್ ಉಪಾಧ್ಯಕ್ಷರು ಸುದೀಪ್ ,ಹೇಮಂತ್,ಚರಣ, ನವೀನ್,ಪೃಥ್ವಿ,ಸಂತು,ಮಂಜುನಾಥ್, ಸುನೀಲ್ ಮತ್ತು ಜೈ ಭೀಮ್ ಸಂಘಟನೆ ಹಾಗೂ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಹೋರಾಟದಲ್ಲಿ ಭಾಗಿಯಾಗಿದ್ದರು.
ವರದಿ ಅಮಿತ್ ಆರ್ ಆನಂದಪುರ