ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯ ವೇಳೆ ತನ್ನ ಕುಟುಂಬವನ್ನು ರಕ್ಷಿಸಿದ ಕಾಶ್ಮೀರಿ ಮುಸ್ಲಿಮರಿಗೆ ಛತ್ತೀಸ್‌ಗಢ ಬಿಜೆಪಿ ಯುವ ನಾಯಕ ಕೃತಜ್ಞತೆ ಸಲ್ಲಿಸಿದ್ದಾರೆ.
ಛತ್ತೀಸ್‌ಗಢದ ಬಿಜೆಪಿ ಯುವ ನಾಯಕ ಅರವಿಂದ್ ಎಸ್ ಅಗರ್ವಾಲ್ ಅವರು ತಮ್ಮ ಪತ್ನಿ ಮತ್ತು ಮಗುವನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಕಾಶ್ಮೀರದ ಮುಸ್ಲಿಂ ಯುವಕ ನಜಕತ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಅಗರ್ವಾಲ್, “ನೀವು ನಿಮ್ಮ ಪ್ರಾಣವನ್ನೇ ಪಣಕ್ಕಿಟ್ಟು ನಮ್ಮ ಜೀವಗಳನ್ನು ಉಳಿಸಿದ್ದೀರಿ. ನಜಕತ್ ಭಾಯ್ ಅವರ ಉಪಕಾರವನ್ನು ನಾವು ಎಂದಿಗೂ ಮರೆಯುವುದಿಲ್ಲ. ಅವರ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ” ಎಂದಿದ್ದಾರೆ.
A BJP youth leader Arvind S Agrawal from Chattisgarh took to Facebook to express heartfelt gratitude towards Nazakat Bhai, a Kashmiri local who risked his life to save his wife and child who were separated. “Aapne apni jaan daav mein lagaake hamari jaan bachayi, hum Nazakat Bhai… pic.twitter.com/G15dz0r3kf
— Mohammed Zubair (@zoo_bear) April 24, 2025
ಆದರೆ, ಬಿಜೆಪಿಗರು ದಾಳಿ ವಿಚಾರದಲ್ಲಿ ಕಾಶ್ಮೀರಿ ಮುಸ್ಲಿಮರನ್ನು ದೂರು ನೀಡಿದ್ದಾರೆ. ಅವರ ವಿರುದ್ಧ ಕೋಮುದ್ವೇಷ ಹರುಡುತ್ತಿದ್ದಾರೆ. ಆದರೆ, ಕಾಶ್ಮೀರಿ ಮುಸ್ಲಿಮರು ಮಾನವೀಯತೆ ಮರೆಯುತ್ತಿದ್ದಾರೆ. ಸಂತ್ರಸ್ತರ ರಕ್ಷಣೆಗಾಗಿ ತಮ್ಮ ಜೀವವನ್ನೂ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ.