ಕಾಡುಹಂದಿ ದಾಳಿ ನಡೆಸಿ ಕುರಿಗಾಯಿರೊಬ್ಬನನ್ನು ತೀವ್ರ ಗಾಯಗೊಳಿಸಿರುವ ಘಟನೆ ಲಿಂಗಸುಗೂರು ತಾಲ್ಲೂಕು ಮುದಗಲ್ ಪಟ್ಟಣದ ವ್ಯಾಪ್ತಿಯ ಕುಮಾರ್ ಖೇಡ್ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಹನುಮಂತ ತಂದೆ ಬಸಪ್ಪ (35) ಕುರಿ ಕಾಯಲು ಹೋದಾಗ ಏಕಾಏಕಿ ಕಾಡುಹಂದಿ ನಡೆಸಿದೆ.ಕೋರೆಯಿಂದ ಹೊಟ್ಟೆ ,ಕಾಲು , ಎದೆ,ಬೆನ್ನಿನ ಭಾಗಕ್ಕೆ ತಿವಿದು ಗಾಯಗೊಳಿಸಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಾಲುವೆಗೆ ಉರುಳಿದ ಟ್ರಾಕ್ಟರ್ ;ಓರ್ವ ಮಹಿಳೆ ಸಾವು ,ಆರು ಜನರಿಗೆ ಗಾಯ
ಮಾಹಿತಿ ತಿಳಿಯುತ್ತಿದ್ದಂತೆ ಆರೋಗ್ಯ ರಕ್ಷಕವಚ ಸಿಬ್ಬಂದಿ ಬಸಲಿಂಗಪ್ಪ ನಿರಲ್ ಕೇರಿ, ಹಾಗೂ ಪೈಲೆಟ್ ಮಾಹಂತೇಶ್ ಸ್ಥಳಕ್ಕೆ ಧಾವಿಸಿ ವ್ಯಕ್ತಿಯನ್ನ ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ಮುದಗಲ್ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
