ಪಹಲ್ಗಾಮ್ ಭಯೋತ್ಪಾದಕ ದಾಳಿಯು ‘ಗುಪ್ತಚರ ವೈಫಲ್ಯ’ದಿಂದ ನಡೆದಿದೆ. ಈ ವೈಫಲ್ಯ ಮತ್ತು ದಾಳಿಗೆ ಉನ್ನತ ಮಟ್ಟದಲ್ಲಿ ಇರುವವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಶಂಕರ್ ರಾಯ್ ಚೌಧರಿ ಅವರು ಹೇಳಿದ್ದಾರೆ.
ದೇಶದ 18ನೇ ಸೇನಾ ಮುಖ್ಯಸ್ಥರಾಗಿದ್ದ ರಾಯ್ ಚೌಧರಿ, “ಗುಪ್ತಚರ ವೈಫಲ್ಯವನ್ನು ನಾನು ಅನುಮಾನಿಸುತ್ತೇನೆ. ಯಾರಾದರೂ ಈ ಲೋಪಗಳಿಗೆ ಉತ್ತರಿಸಬೇಕು. ನಿರ್ಲಕ್ಷ್ಯಕ್ಕೆ ಖಂಡಿತವಾಗಿಯೂ ಯಾರಾದರೂ ಜವಾಬ್ದಾರರಾಗಿರಬೇಕು ಮತ್ತು ಅದರ ಪರಿಣಾಮಗಳಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು” ಎಂದಿದ್ದಾರೆ.
ಈ ವರದಿ ಓದಿದ್ದೀರಾ?: ಖಂಡನೆ, ಸಭೆ, ಬಂದ್, ಪ್ರತಿಭಟನೆ – ಇವು ಪಹಲ್ಗಾಮ್ ದಾಳಿಗೆ ರಾಜಕೀಯ ಪಕ್ಷಗಳ ಪ್ರತಿಕ್ರಿಯೆ; ಅಸಹ್ಯ ಮೆರೆದ ಬಿಜೆಪಿ
“ಪಹಲ್ಗಾಮ್‌ನಲ್ಲಿ 26 ನಾಗರಿಕರು, ಹೆಚ್ಚಾಗಿ ಪ್ರವಾಸಿಗರನ್ನು ಅವರ ಕುಟುಂಬ ಸದಸ್ಯರ ಎದುರೇ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಈ ದಾಳಿಯ ಹಿಂದೆ ಪಾಕಿಸ್ತಾನ ಮತ್ತು ಅದರ ಗುಪ್ತಚರ ಸಂಸ್ಥೆ ಐಎಸ್ಐ (ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್) ಪಾತ್ರವಿದೆ ಎಂಬ ಅನುಮಾನವಿದೆ. ಲಷ್ಕರ್-ಎ-ತೈಬಾ (ಎಲ್‌ಇಟಿ) ಅಂಗ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಇಷ್ಟೊಂದು ನುಸುಳುಕೋರರು ಹೇಗೆ ಹೊರಬರಲು ಸಾಧ್ಯವಾಯಿತು? ಇದನ್ನು ತನಿಖೆ ಮಾಡಬೇಕಾಗಿದೆ” ಎಂದು ಅವರು ತಿಳಿಸಿದ್ದಾರೆ.
ಈ ವರದಿ ಓದಿದ್ದೀರಾ?: ಬಿಜೆಪಿಗೆ ವರ್ತಮಾನದ ಸಭ್ಯತೆಯೂ ಇಲ್ಲ, ಇತಿಹಾಸದ ಜ್ಞಾನವೂ ಇಲ್ಲ
“ಭಾರತ ಸರ್ಕಾರವು ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ನಿರ್ಬಂಧಗಳನ್ನು ಹೇರಿದೆ. ಆದರೆ, ಈಗ ತೆಗೆದುಕೊಳ್ಳಲಾದ ರಾಜತಾಂತ್ರಿಕ ಕ್ರಮಗಳು ಸಾಕಾಗುವುದಿಲ್ಲ. ಪ್ರತಿರೋಧ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅವರು ಯಾವ ರೂಪವನ್ನು ತೆಗೆದುಕೊಳ್ಳುತ್ತಾರೆಯೂ ಅದೇ ರೀತಿಯಲ್ಲಿ ನಾವು ಪ್ರತಿಕ್ರಿಯಿಸಬೇಕಾಗುತ್ತದೆ. ಸಾಂಪ್ರದಾಯಿಕ ಕ್ರಮಗಳು ಸಾಕಾಗುವುದಿಲ್ಲ” ಎಂದು ಹೇಳಿದ್ದಾರೆ.
“ಅಂತರರಾಷ್ಟ್ರೀಯ ರಾಜತಾಂತ್ರಿಕತೆಯನ್ನು ಕಾಪಾಡಿಕೊಳ್ಳುವ ಮೂಲಕ ನಾವು ಪ್ರತೀಕಾರ ತೀರಿಸಿಕೊಳ್ಳಬೇಕು. ಪಾಕಿಸ್ತಾನ ಮತ್ತು ಐಎಸ್‌ಐ ಯಾವಾಗಲೂ ಸಕ್ರಿಯ ಪಾತ್ರವನ್ನು ವಹಿಸಿವೆ. ನಮಗೆ ನಮ್ಮದೇ ಆದ ಗುಪ್ತಚರ ಸಂಸ್ಥೆ RAW ಇದೆ. ನಾವು ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು” ಎಂದಿದ್ದಾರೆ.
ದೇಶದ ಹಿರಿಯ ಅನುಭವಿಗಳೆಲ್ಲರ ಸಮಯೋಚಿತ ಮಾತುಗಳನ್ನು ಪ್ರಧಾನಿಯಾದವನು ಆಲಿಸಬೇಕು; ಸಲಹೆಗಳನ್ನು ಪರಿಶೀಲಿಸಬೇಕು.
‘ಮನ್ ಕಿ ಬಾತ್’ನ್ನು ಪ್ರಜೆಗಳು ಆಲಿಸುತ್ತಾರೆ.
‘ಜನ್ ಕಿ ಬಾತ್’ನ್ನು ಪ್ರಧಾನಿ ಆಲಿಸಬೇಕು.