ಇಂದು ಶಿವಮೊಗ್ಗದಲ್ಲಿ ಡಿ.ಎಸ್.ಎಸ್ (ಅಂಬೇಡ್ಕರ್ ವಾದ) ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್ ಅಂಬೇಡ್ಕರ್ ರವರ 134ನೇ ಜನ್ಮ ದಿನಾಚರಣೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪನವರು ಭಾಗವಹಿಸಿದರು, ಕಾರ್ಯಕ್ರಮದ ಉದ್ಘಾಟನೆಯ ನಂತರ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡಿದರು.

ಅಂಬೇಡ್ಕರ್ ರವರು ಕೊಟ್ಟಂತಹ ಸಂವಿಧಾನದ ಕೊಡುಗೆಯನ್ನು ಈ ದೇಶದ ಪ್ರತಿಯೊಬ್ಬರು ಸ್ಮರಿಸಬೇಕು, ಎಲ್ಲಾ ಧರ್ಮಗಳನ್ನು ಒಳಗೊಂಡಂತೆ ಎಲ್ಲರೂ ಒಪ್ಪಿಕೊಳ್ಳುವಂತ ಒಂದು ಗ್ರಂಥ ಅಂದರೆ ಅದು ಸಂವಿಧಾನ. ಸ್ವಾತಂತ್ರ್ಯ ಪೂರ್ವದಲ್ಲಿ ಯಾವುದೇ ಸ್ವಾತಂತ್ರವಿಲ್ಲದೆ ಬದುಕುತ್ತಿದ್ದೇವು, ಬಹಳಷ್ಟು ಜನರ ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿತು, ಯಾವುದಕ್ಕಾಗಿ ಸ್ವಾತಂತ್ರ್ಯ ತಂದು ಕೊಟ್ಟರು ಅನ್ನೊದನ್ನ ಸಂವಿಧಾನ ಪೀಠಿಕೆಯಲ್ಲಿ ತಿಳಿಸಿದ್ದಾರೆ. ನಾವು ಕೇವಲ ಹುಟ್ಟಹಬ್ಬವನ್ನ, ಸಂವಿಧಾನ ದಿನಾಚರಣೆಯನ್ನ ಮಾಡಿದರೆ ಸಾಲದು ಅದರ ಜೊತೆಗೆ ಅದರ ಅರ್ಥವನ್ನು ಅಂಬೇಡ್ಕರ್ ರವರ ವಿಚಾರಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.ಈ ಕೆಲಸವನ್ನು ನಾವೆಲ್ಲರೂ ಸೇರಿ ಮಾಡೋಣವೆಂದರು.
ಈ ಸಂದರ್ಭದಲ್ಲಿ ಈದಿನ ಡಾಟ್ ಕಾಮ್ ಹೊರ ತಂದಿರುವ ಅರಿವೇ ಅಂಬೇಡ್ಕರ ವಿಶೇಷ ಸಂಚಿಕೆಯನ್ನು ವೇದಿಕೆಯ ಗಣ್ಯರೊಂದಿಗೆ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಡಿ.ಎಸ್.ಎಸ್ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್,ಮೈಸೂರು ವಿಭಾಗೀಯ ಸಂಚಾಲಕರಾದ ಟಿ.ಹೆಚ್ ಹಾಲೇಶಪ್ಪ, ರಘು ಡಿ, ಮೊದಲಾದವರು ಉಪಸ್ಥಿತರಿದ್ದರು.