ಸಿಂಧನೂರು ನಗರದಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಗಾಳಿ ಮಳೆಗೆ 10 ಕ್ಕೂ ಹೆಚ್ಚಿನ ಮನೆಗಳ ಟಿನ್ ಶೆಡ್ ಗಾಳಿಗೆ ಹಾರಿ ಹೋಗಿವೆ.ಗ್ರಾಮದ ಸುತ್ತಮುತ್ತ ಅನೇಕ ಗಿಡಗಳು ನೆಲಕ್ಕೆ ಉರುಳಿದೆ ಪರಿಣಾಮ ಜನರ ಜೀವನ ಅಸ್ತವ್ಯಸ್ತ ಗೊಂಡಿದೆ.
ನಗರದ ಜನತಾ ಕಾಲೋನಿಯಲ್ಲಿ ಗಾಳಿ ಮಳೆಗೆ ಶೆಡ್ಡ್ ಗಳು ಮುಗುಚಿ ಹೋಗಿದ್ದು ಹಾಗೂ ವಿದ್ಯುತ್ ಕಂಬಗಳು ಕೂಡ ಬಿದ್ದು ಕೆಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಶೇಡ್ ನಲ್ಲಿ ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ಜನರು ಹೊರಗಡೆ ಬಂದು ಬೇರೆ ಮನೆಯವರ ಸಹಾಯಕ್ಕೆ ಧಾವಿಸಿದ್ದಾರೆ.ಮನೆಯಲ್ಲಿದ್ದ ದವಸ ಧಾನ್ಯಗಳು ಎಲ್ಲಾ ನೀರುಪಾಲಾಗಿ ಕೊಚ್ಚಿಕೊಂಡು ಹೋಗಿ ಕುಟುಂಬಸ್ಥರು ಪರಿತಪಿಸುವಂತಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು |ಟೋಲ್ ಕೇಂದ್ರ ಧ್ವಂಸ; ಶಾಸಕಿ ಪುತ್ರ ಸೇರಿ 14 ಜನರ ವಿರುದ್ಧ ಪ್ರಕರಣ ದಾಖಲು
ಅನೇಕ ಮನೆಗಳು ಟಿನ್ ಶೆಡ್ ಗಳು ಹಾರಿ ಹೋಗಿ ಮನೆಯಲ್ಲಿ ಇರಲು ಆಗುತ್ತಿಲ್ಲ ಮುಂದಿನ ಜೀವನ ಹೇಗೆ ಮಾಡಬೇಕು ಎಂದು ಸಂತ್ರಸ್ತೆ ಅಳಲು ತೋಡಿಕೊಂಡರು.
ಸಿಂಧನೂರು ನಗರಸಭೆ ಹಾಗೂ ತಾಲೂಕು ಆಡಳಿತ ಸಂತ್ರಸ್ಥರ ನೆರವಿಗೆ, ಪರ್ಯಾಯ ವ್ಯವಸ್ಥೆಗೆ ಮತ್ತು ಪರಿಹಾರಕ್ಕೆ ಮುಂದಾಗಬೇಕು ಎಂದು ಸಿಪಿಐಎಂಎಲ್ ರೆಡ್ ಸ್ಟಾರ್ ಸಿಂಧನೂರು ತಾಲೂಕು ಸಮಿತಿ ಆಗ್ರಹಿಸಿದರು.